ಗೊಳಸಂಗಿ ಸಮೀಪದ ಕೂಡಗಿಯಲ್ಲಿ ಕರ್ನಾಟಕ ರಣಾ ವೇದಿಕೆ ಗ್ರಾಮ ಟಕಕ್ಕೆ ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ಶನಿವಾರ ಚಾಲನೆ ನೀಡಿದರು. ಶಿವಪ್ರಕಾಶ ಶಿವಾಚಾರ್ಯರು, ಕಲ್ಲಿನಾಥ ದೇವರು, ಮೈರಾಜಪೀರಾ ಜಾಗೀರದಾರ ಇದ್ದರು. 
ನ್ಯೂಸ್

ಕನ್ನಡಿಗರಿಗೆ ಕೆಲಸ ನೀಡದಿದ್ದರೆ ಹೋರಾಟ

ಗೊಳಸಂಗಿ; ಕೂಡಗಿ ಭಾಗದಲ್ಲಿ ನಿರ್ಮಾಣಗೊಂಡಿರುವ ಎನ್​ಟಿಪಿಸಿಯ ಉಷ್ಣ ವಿದ್ಯುತ್​ ಸ್ಥಾವರದಲ್ಲಿ ಕನ್ನಡಿಗರಿಗೆ ಸಿಂಹಪಾಲು ಕೆಲಸದ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಣಾ ವೇದಿಕೆ (ನಾರಾಯಣಗೌಡರ ಬಣ) ಅವಳಿ ಜಿಲ್ಲೆಯ ಉಸ್ತುವಾರಿ ಅಶೋಕ ಹಾರಿವಾಳ ಎಚ್ಚರಿಸಿದರು.

ಕೂಡಗಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮೊಸರು ನಾಡಿನ ಕನ್ನಡಿಗರ ಸಮಾವೇಶ, 69ನೇ ಗ್ರಾಮ ಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೀಪವು ತನ್ನನ್ನು ತಾನು ಸುಟ್ಟುಕೊಂಡು ಇತರರಿಗೆ ಬೆಳಕು ನೀಡುವಂತೆ ಈ ಭಾಗದ ಜನ ತಮ್ಮ ಸಹಸ್ರಾರು ಎಕರೆ ಲವತ್ತಾದ ಜಮೀನನ್ನು ಸ್ಥಾವರಕ್ಕೆ ಧಾರೆ ಎರೆದು 5 ರಾಜ್ಯಗಳಿಗೆ ವಿದ್ಯುತ್​ ನೀಡುವಲ್ಲಿ ತ್ಯಾಗ ಮಾಡಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಕೆಲಸದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ಬಸವನ ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಮೈರಾಜಫೀರಾ ಜಾಗೀರದಾರ ಸಾನಿಧ್ಯ ವಹಿಸಿದ್ದರು.

ಕರವೇ ರಾಜ್ಯಉಪಾಧ್ಯ ಎಂ.ಸಿ. ಮುಲ್ಲಾ, ಪ್ರಮುಖರಾದ ನಬೀಶಾ ದರವೇಶ, ಶಿವಲಿಂಗಪ್ಪ ಇಬ್ರಾಹಿಂಪುರ, ಮಹ್ಮದ ಆರ್​ೀ ತಾಳಿಕೋಟಿ, ಅಬ್ದುಲ್​ ರಹೇಮಾನ್​ ಪತ್ತೇಮಹ್ಮದ, ಕಶೀಮಸಾಬ ಕೊಡಗಾನೂರ, ಶಫೀಕ ಇನಾಮದಾರ, ರಾಮಣ್ಣ ಗೊಲ್ಲರ, ಯಮನಪ್ಪ ಗಡದಿನ್ನಿ, ಜಾವೀದ ಜಾಗೀರದಾರ, ಮಲ್ಲನಗೌಡ ಪಾಟೀಲ ಉಪಸ್ಥಿತರಿದ್ದರು.