ಮುದ್ದೇಬಿಹಾಳ: ಹೋಳಿ, ರಂಜಾನ್ ಹಬ್ಬಗಳಲ್ಲಿ ಶಾಂತಿ, ಸೌಹಾರ್ದತೆ ಕಾಯ್ದುಕೊಳ್ಳಲು ಸಹಕರಿಸಬೇಕು ಎಂದು ಪೊಲೀಸ್ ಇನ್ಸಪೆಕ್ಟರ್ ಮೆಹಮ್ಮೂದ್ ಸಿಯುದ್ದೀನ್ ಹೇಳಿದರು.
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿರುವ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಹೋಳಿ, ರಂಜಾನ್ ಹಬ್ಬಗಳ ಹಿನ್ನೆಲೆ ಶಾಂತಿ ಸಭೆ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಸಮುದಾಯದವರು ಸೇರಿ ಬಣ್ಣ ಆಡುವುದರಲ್ಲಿ ಯಾವ ತಪ್ಪೂ ಇಲ್ಲ. ಹೋಳಿ ಹಬ್ಬ ನಮ್ಮ ದೇಶದ ವಿಜಯದ ಸಂಕೇತ. ಮಧ್ಯಾಹ್ನ 2ರೊಳಗೆ ಬಣ್ಣ ಆಡುವುದನ್ನು ಮುಕ್ತಾಯಗೊಳಿಸಿ ವ್ಯಾಪಾರಸ್ಥರು ಸೇರಿ ಎಲ್ಲರಿಗೂ ಅವರವರ ದೈನಂದಿನ ಕೆಲಸ ಕಾರ್ಯಕ್ಕೆ ಅವಕಾಶ ಮಾಡಿಕೊಡಬೇಕು. ಮಾ. 30 ಅಥವಾ 31 ಎರಡು ದಿನಗಳಲ್ಲಿ ಚಂದ್ರನ ದರ್ಶನ ಆಗುವ ದಿನದಂದು ರಂಜಾನ್ ಹಬ್ಬ ಇದ್ದು ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿ ಸೌಹಾರ್ದತೆ ಕಾಪಾಡಬೇಕು ಎಂದರು.
ಪಿಎಸ್ಐ ಸಂಜಯ್ ತಿಪ್ಪರಡ್ಡಿ, ಮಾತನಾಡಿ, ರಸ್ತೆಗಳಲ್ಲಿ ವಾಹನ ತಡೆದು ಪ್ರಯಾಣಿಕರಿಗೆ ಬಲವಂತವಾಗಿ ಬಣ್ಣ ಹಚ್ಚುವ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುವುದನ್ನು ಗಸ್ತು ಪೊಲೀಸರು ತಡೆಯಲು ಕ್ರಮ ಜರುಗಿಸುತ್ತಾರೆ. ಇಂಥ ಕತ್ಯಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಪೊಲೀಸ್ ಠಾಣೆಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು. ಎರಡೂ ಹಬ್ಬಗಳಲ್ಲಿ ಶಾಂತಿ ಭಂಗ ಆಗದಂತೆ ನೋಡಿಕೊಳ್ಳಬೇಕು ಎಂದರು.
ಪುರಸಭೆ ಅಧ್ಯ ಮಹಿಬೂಬ ಗೊಳಸಂಗಿ, ಪುರಸಭೆ ಮಾಜಿ ಸದಸ್ಯ ಬಸಯ್ಯ ನಂದಿಕೇಶ್ವರಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯ ಕಾಮರಾಜ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಶಿರೋಳ, ಭೋವಿ ಸಮಾಜದ ಮುಖಂಡ ಪರಶುರಾಮ ನಾಲತವಾಡ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಹೊಳಿ, ಬಿ.ಎಸ್. ಪಾಟೀಲ ಸರೂರ ಇನ್ನಿತರರು ಮಾತನಾಡಿ ಸಲಹೆ ನೀಡಿದರು.
ವಾಲ್ಮೀಕಿ ಸಮಾಜದ ಅಧ್ಯ ಬಲಭೀಮ ನಾಯಕಮಕ್ಕಳ, ಸದು ಹಿರೇಮಠ, ನಾಗೇಶ ಭಜಂತ್ರಿ, ಉದಯಸಿಂಗ ರಾಯಚೂರ, ಅಶೋಕ ಪಾದಗಟ್ಟಿ, ಪುನೀತ್ ಹಿಪ್ಪರಗಿ, ಸಮೀರ್ ದ್ರಾ, ದಾವಲ್ ಗೊಳಸಂಗಿ, ಸಂಜು ಬಾಗೇವಾಡಿ, ಸಂಗಣ್ಣ ಮೇಲಿನಮನಿ, ರವೀಂದ್ರ ಬಿರಾದಾರ, ಶರಣಬಸ್ಸು ಚಲವಾದಿ, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಪೊಲೀಸ್ ಗುಪ್ತಚರ ವಿಭಾಗದ ಸಂಗಮೇಶ ಚಲವಾದಿ ಕಾರ್ಯಕ್ರಮ ನಿರ್ವಹಿಸಿದರು.