ವಿಜಯಪುರ : ನಗರದ ಉಪಲಿ ಬುರ್ಜ್ ಸಮೀಪವಿರುವ ಬಿಡಿಇ ಸೂಸೆಟಿಯ ಸಭಾಭವನದಲ್ಲಿ ಭಾನುವಾರ ಬೆಳಿಗ್ಗೆ 10.30 ಕ್ಕೆ ಹಿರಿಯ ಸಾಹಿತಿ ಡಿ.ಎನ್.ಅಕ್ಕಿ ಅವರ ಉಪನ್ಯಾಸ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವಿಜಯಪುರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿ ಡಿ.ಎನ್.ಅಕ್ಕಿ ಅವರ ಉಪನ್ಯಾಸ ಏರ್ಪಡಿಸಲಾಗಿದೆ. ಅಭಾಸಾಪ ಜಿಲ್ಲಾಧ್ಯ ನಾರಾಯಣ ಬಾಬಾನಗರ ಅವರ "ಕಾಖಂಡಕಿ ಶ್ರೀಮಹಿಪತಿ ದಾಸರ ಮುಂಡಿಗೆಗಳು' , ಅಭಾಸಾಪ ಸದಸ್ಯರಾದ ಬಳವಂತ ಕುಲಕರ್ಣಿ ಅವರ "ಅರುಣೋದಯ ಕಿರಣ' ಕವನ ಸಂಕಲನ ಹಾಗೂ ಅಭಾಸಾಪ ಇಂಡಿ ತಾಲ್ಲೂಕಾಧ್ಯ ಕಿಶೋರ ಕುಮಾರ್ ಅವರು ಅನುವಾದಿಸಿರುವ "ಅರವಿಂದರ ಪ್ರೀತಿ ಮತ್ತು ಮೃತ್ಯು' ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಹಿರಿಯ ಸಾಹಿತಿ ಸಿರಿಗನ್ನಡ ವೇದಿಕೆಯ ಸಂಸ್ಥಾಪಕಾಧ್ಯ ಎನ್.ಆರ್ ಕುಲಕರ್ಣಿ ಉಪಸ್ಥಿತರಿರುವರು.