ಶ್ರೀಶೈಲ ಬೆಟ್ಟ 
ನ್ಯೂಸ್

ಶ್ರೀಶೈಲ ಬೆಟ್ಟದಲ್ಲಿ 24ನೇ ವರ್ಷದ ದಾಸೋಹ ಸೇವೆ

ವಿಜಯಪುರ: ನಗರದ ಕಾಸಗೇರಿ ಓಣಿ ಬಸವ ನಗರ ಹಾಗೂ ಶ್ರೀಶೈಲ ಭಕ್ತಾದಿ ಮಂಡಳಿಯಿಂದ ಶ್ರೀಶೈಲ ಗುಡ್ಡದ ಅಂಬಲಿಹಳ್ಳ &ಗಂಗನಪಳ್ಳಿ ಮಧ್ಯದಲ್ಲಿ ಪಾದಯಾತ್ರಾರ್ಥಿಗಳಿಗೆ 24ನೇ ವರ್ಷದ ಮಾ. 22ರಿಂದ 28ರ ವರೆಗೆ ಅನ್ನಸಂತರ್ಪಣೆ ಹಾಗೂ ವೈದ್ಯಕಿಯ ಉಚಿತ ಸೇವೆ ವ್ಯವಸ್ಥೆ ಮಾಡಲಾಗಿದೆ. ಪ್ರತಿವರ್ಷ ಅಂದಾಜು 8 ರಿಂದ 10 ಲ ಭಕ್ತರು ಅನ್ನಪ್ರಸಾದ ಸೇವಿಸುತ್ತಾರೆ.

22ರಂದು ಶ್ರೀ ಶೈಲ ಜಗದ್ಗುರು ಡಾ.ಚನ್ನಸಿದ್ಧ್ದರಾಮ ಪಂಡಿತರಾಧ್ಯ ಶಿವಾಚಾರ್ಯರು ದಾಸೋಹಕ್ಕೆ ಚಾಲನೆ ನೀಡುವರು.

ಇಲ್ಲಿ ಬಿಟ್ಟರೆ ಮುಂದೆ ಕೈಲಾಸ ಬಾಗಿಲು ವರೆಗೆ ದಾಸೋಹ ಸೇವೆ ಇರುವುದಿಲ್ಲ. ಭಕ್ತರು ಇಲ್ಲಿ ಪ್ರಸಾದ ಸೇವಿಸಿ ಮುಂದೆ ಸಾಗುತ್ತಾರೆ. ಪಾದಯಾತ್ರೆ ಮಾಡುವ ಭಕ್ತರಿಗೆ ದಾಸೋಹ, ವೈದ್ಯಕಿಯ ತಪಾಸಣೆ ಸೇವೆ, ಚಿಕ್ಕ ಮಕ್ಕಳಿಗೆ ಹಾಲು ಹಣ್ಣು, ಉಪವಾಸ ನಿರತರಿಗೆ ಶೇಂಗಾ, ಬೆಲ್ಲ ಹಾಗೂ ಬಾಳೆಹಣ್ಣು ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಶೈಲ ಭಕ್ತಾದಿ ಮಂಡಳಿ ಅಧ್ಯ ಎಸ್​.ಆರ್​.ಬಿರಾದಾರ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಎಸ್​.ಆರ್​.ಬಿರಾದಾರ (9886501125) ಹಾಗೂ ಎಸ್​.ಎಂ. ಹಿರೇಮಠ (9880286646) ಅವರನ್ನು ಸಂಪರ್ಕಿಸಲು ಕೋರಲಾಗಿದೆ.