ತೊರವಿ ನರಸಿಂಹ ದೇವಸ್ಥಾನದಲ್ಲಿ ಭಾನುವಾರ ನಡೆದ ಗಾಯತ್ರಿ ಹೋಮದ ಸಮಾರೋಪದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಸನ್ಮಾನಿಸಲಾಯಿತು. ರಾವೇಂದ್ರ ಕುಲಕರ್ಣಿ, ಶಶಿಕಾಂತ ಜೋಶಿ, ಆನಂದ ಜೋಶಿ ಇತರರಿದ್ದರು.  
ನ್ಯೂಸ್

ಹಿಂದು ಸಂಸತಿಗೆ ವಿಪ್ರರ ಕೊಡುಗೆ ಅನನ್ಯ

ವಿಜಯಪುರ: ದೇಶದಲ್ಲಿ ಹಿಂದು ಸಂಸತಿ ಉಳಿಸಿ ಬೆಳೆಸುವಲ್ಲಿ ವಿಪ್ರ ಸಮಾಜದ ಕೊಡುಗೆ ಮರೆಯುವಂತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂದಿಂದ ತೊರವಿ ನರಸಿಂಹ ದೇವಸ್ಥಾನದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಗಾಯತ್ರಿ ಜಪಯಜ್ಞ ಹಾಗೂ ಮಹಾರುದ್ರ ಹೋಮ ಸಮಾರೋಪದಲ್ಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.

ವಿಪ್ರ ಸಮಾಜ ಸದಾ ವಿಶ್ವದ ಒಳಿತನ್ನು ಬಯಸುತ್ತದೆ. ಸರ್ವೇಜನ ಸುಖಿನೋ ಭವಂತು ಎಂಬ ತತ್ವದಡಿಯಲ್ಲಿ ಪ್ರಪಂಚದ ಎಲ್ಲ ಜನರಿಗೂ ಶುಖ, ಶಾಂತಿ ಲಭಿಸಲಿ ಎಂದು ಬಯಸುವ ಸಮಾಜ ಇದಾಗಿದೆ. ಹೋಮ, ಹವನ ಮಾಡುವುದರಿಂದ ಉತ್ತಮ ಮಳೆಯಾಗುತ್ತದೆ. ಮಳೆಯಾದರೆ ಬೆಳೆ ಬೆಳೆಯಲು ಸಾಧ್ಯ. ಲೋಕ ಕಲ್ಯಾಣಾರ್ಥ ಇಂಥ ಯಜ್ಞ ಮಾಡುತ್ತಿರುವ ಬ್ರಾಹ್ಮಣ ಸಮಾಜದ ಕಾರ್ಯ ಶ್ಲಾನೀಯ ಎಂದರು.

ಭಾನುವಾರ ಬೆಳಗ್ಗೆ ಗಾಯತ್ರಿ ಜಪಯಜ್ಞ ಹಾಗೂ ಮಹಾರುದ್ರ ಹೋಮದ ಪೂರ್ಣಾಹುತಿ ನಡೆಯಿತು. ನಂತರ ಶ್ರೀ ಲಕ್ಷಿ$್ಮ ನರಸಿಂಹ ದೇವರ ರಥೋತ್ಸವ ವೈಭವದಿಂದ ಜರುಗಿತು. ದಾನಿಗಳಿಗೆ ಸನ್ಮಾನ ಸಮಾರಂಭ ಹಾಗೂ ಭಕ್ತರಿಗೆ ಸಾಮೂಹಿಕ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಪಂ. ಮಧ್ವಾಚಾರ್ಯ ಮೊಕಾಶಿ, ಪಂ.ವೇದನಿಧಿ ಆಚಾರ್ಯ, ಶ್ರೀಕಾಂತಾಚಾರ್ಯ ಆಶ್ರಿತ, ಕೃಷ್ಣಾಚಾರ್ಯ ಗಲಗಲಿ, ಸುಧನ್ವ ಸಂಗಮ, ಕರ್ನಾಟಕ ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ಆನಂದ ಜೋಶಿ, ತೊರವಿ ನರಸಿಂಹ ದೇವಸ್ಥಾನ ಸಮಿತಿ ಅಧ್ಯಕ್ಷ ರಾವೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಶಶಿಕಾಂತ ಜೋಶಿ, ಕಾರ್ಯದರ್ಶಿ ಸಂತೋಷ ಕುಲಕರ್ಣಿ ಹಾಗೂ ವಿಪ್ರ ಸಮಾಜದ ಪ್ರಮುಖರಾದ ಉಲ್ಲಾಸ ಪಾಟೀಲ, ಎಸ್​.ಎಂ.ದೇಸಾಯಿ, ವಿದ್ಯಾ ಕುಲಕರ್ಣಿ, ಚೈತ್ರಾ ಗೊರಟೆಕರ, ಆನಂದ ಕುಲಕರ್ಣಿ, ಪ್ರದಿಪ ಕುಲಕರ್ಣಿ, ರಮೇಶ ನಾಮಣ್ಣವರ, ಪವನ ಗಲಗಲಿ, ಸಂದೀಪ ಕುಲಕರ್ಣಿ, ಕೆ.ಬಿ.ಕುಲಕರ್ಣಿ, ರಾಜೇಂದ್ರ ಜೋಶಿ, ಸುಧೀಂದ್ರ ಜೋಶಿ, ಗೋವಿಂದ ದೇಶಪಾಂಡೆ, ಪ್ರಹ್ಲಾದ ಕುಲಕರ್ಣಿ, ವಿಜಯ ಜೋಶಿ, ಅನಂತ ಕುಲಕರ್ಣಿ, ಅಂಬಾದಾಸ ಜೋಶಿ ಹಾಗೂ ಭಕ್ತರು ಪಾಲ್ಗೊಂಡಿದ್ದರು