ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್​ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವರ ಜಯಂತಿಯಲ್ಲಿ ಎಸ್​.ಆರ್​. ಚಾಳೇಕರ ಮಾತನಾಡಿದರು. ಸಂತೋಷ ಬಂಡೆ, ಎಸ್​.ಎಸ್​. ಅರಬ, ಅಲ್ಫಿಯಾ ಅಂಗಡಿ ಇದ್ದರು.  
ನ್ಯೂಸ್

ಸರ್ವಜ್ಞನ ವಚನಗಳು ದಾರಿದೀಪ

ಇಂಡಿ : ಆಡು ಮುಟ್ಟದ ಸೊಪ್ಪಿಲ್ಲ, ಸರ್ವ ಹೇಳದ ಮಾತಿಲ್ಲ ಎಂಬಂತೆ ಸಮಾಜದ ಉದ್ಧಾರಕ್ಕಾಗಿ ಪ್ರತಿ ವಿಷಯಗಳ ಮೇಲೆ ವಚನಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಅವರ ತ್ರಿಪದಿಗಳನ್ನು ಅರ್ಥೆಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನ ಹಸನಾಗಿಸಿಕೊಳ್ಳಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್​ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವರ ಜಯಂತಿಯಲ್ಲಿ ಮಾತನಾಡಿದ ಅವರು, ಸರ್ವ ಸೌಜನ್ಯಶಿಲ, ಗೌರವದ ಬದುಕನ್ನು ಸಾಗಿಸಿ, ಸಮಾಜ ತಿದ್ದುವ ಕೆಲಸ ಮಾಡಿದ್ದಾರೆೆ ಎಂದರು.

ಶಿಕ ಎಸ್​.ಆರ್​. ಚಾಳೇಕರ ಮಾತನಾಡಿ, ಕವಿ ಸರ್ವನ ವಚನಗಳು ಸಾಮಾಜಿಕ ಸುಧಾರಣೆ, ಜಾತ್ಯಾತಿತ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಎಂದರು.

ಮುಖ್ಯ ಶಿಕ ಎಸ್​.ಎಸ್​. ಅರಬ ಅಧ್ಯತೆ ವಹಿಸಿದ್ದರು. ಶಿಕರಾದ ಎನ್​.ಬಿ. ಚೌಧರಿ, ಅಲ್ಫಿಯಾ ಅಂಗಡಿ ಉಪಸ್ಥಿತರಿದ್ದರು.