ಸಿಂದಗಿ:ಪಟ್ಟಣದ ಗಚ್ಚಿನಮಠ&ಸಾರಂಗಮಠದ ಉತ್ತರಾಧಿಕಾರಿಯಾಗಿ ಜಮಖಂಡಿ ತಾಲೂಕಿನ ಕೊಣ್ಣೂರಿನ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರ ಹೆಸರು ೂಷಿಸಲಾಯಿತು.
ಸಾರಂಗಮಠದಲ್ಲಿ ಶನಿವಾರ ನಡೆದ ದಾನಮ್ಮದೇವಿ ದೇವಸ್ಥಾನದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಫಜಲಪುರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಶ್ರೀಮಠದ ನೂತನ ಉತ್ತರಾಧಿಕಾರಿಯನ್ನು ೂಷಿಸಿ ಮಾತನಾಡಿ, ಜಮಖಂಡಿ ತಾಲೂಕಿನ ಕೊಣ್ಣೂರಿನ ಹೊರಗಿನಮಠದ ಪೀಠಾಧಿಪತಿಯಾಗಿರುವ ಡಾ.ವಿಶ್ವಪ್ರಭುದೇವ ಶಿವಾಚಾರ್ಯರನ್ನು ಉಜ್ಜಯಿನಿ, ಶ್ರೀಶೈಲ ಪೀಠದ ಜಗದ್ಗುರುಗಳು ಸಾರಂಗಮಠದ ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಸೂಚಿಸಿದ್ದರು. ತಮ್ಮ ಮುಂದಿನ ಉತ್ತರಾಧಿಕಾರಿ ನೇಮಿಸಿದ ಈಗಿನ ಪೀಠಾಧಿಪತಿ
ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ತ್ಯಾಗ ಮನೋಭಾವ ದೊಡ್ಡದು. ಇಂಥವರಿಗೆ ನಾಡೇ ಶರಣಾಗುತ್ತದೆ. ವಿಶ್ವಪ್ರಭುದೇವರು ವಿದ್ಯಾವಂತರಾಗಿದ್ದು, ಭಕ್ತರನ್ನು ಪ್ರೀತಿ ಮತ್ತು ಕರುಣೆಯಿಂದ ಕಾಣುವ ಗುಣದವರಾಗಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ವಿ.ಡಿ.ವಸದ, ಸಾರಂಗಮಠವು ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದೆ ಎಂದರು.
ಶಾಸಕರಾದ ಅಶೋಕ ಮನಗೂಳಿ ಹಾಗೂ ಜಗದೀಶ ಗುಡಗುಂಟಿಮಠ ಮಾತನಾಡಿ, ೂಷಿತ ಉತ್ತರಾಧಿಕಾರಿ ಶ್ರೀಗಳು ಭವಿಷ್ಯದ ಭಕ್ತ ಪೀಳಿಗೆಗೆ ಸಾರಂಗಮಠದ ಪೀಠ ಪರಂಪರೆ, ಆಚಾರ, ಸದಾಚಾರಗಳನ್ನು ಪಸರಿಸಬೇಕು. ಎಂದಿನಂತೆ ಭಕ್ತರ ಅಧ್ಯಾತ್ಮದ ಹಸಿವನ್ನು ನೀಗಿಸುವತ್ತ ಸಾಗಬೇಕು ಎಂದರು.
ಗಿರಿಸಾಗರದ ಶ್ರೀಗಳು, ಆಲಮೇಲ, ಗೌಡಗಾಂವ ಹಾಗೂ ಪಾಳಾದ ಗುರುಮೂರ್ತಿ ಶ್ರೀಗಳು, ವಿರಕ್ತಮಠದ ಬಸವಪ್ರಭು ಶ್ರೀಗಳು, ಶಾಂತಗಂಗಾಧರ ಸ್ವಾಮೀಜಿ, ಅಭಿನವ ರುದ್ರಮುನಿ ಶಿವಾಚಾರ್ಯರು, ಬಂಥನಾಳದ ಮಹಾಲಿಂಗೇಶ್ವರ ಶ್ರೀಗಳು, ತಪೋರತ್ನಂ ಮಹಾಲಿಂಗೇಶ್ವರ ಸ್ವಾಮಿಗಳು, ಆದಿಶೇಷ ಮಠದ ವೀರರಾಜೇಂದ್ರ ಶ್ರೀಗಳು, ಕಲಕೇರಿ, ಕೆರೂರ, ಬೀಳಗಿ, ಕುಂದರಗಿ ಶ್ರೀಗಳು ಉಪಸ್ಥಿತರಿದ್ದರು