ತಾಳಿಕೋಟೆಯ ಸದ್ಗುರು ಸಾಂಭ ಪ್ರಭು ಶರಣಮುತ್ಯಾ ಜಾತ್ರೆ ಪೋಸ್ಟರ್​ಗಳನ್ನು ಸಿದ್ಧನಗೌಡ ಪೊಲೀಸ್​ ಪಾಟೀಲ ಬಿಡುಗಡೆಗೊಳಿಸಿದರು. ಶರಣಪ್ಪಮುತ್ಯಾ ಶರಣರು, ಡಾ. ಸಿದ್ಧೇಶ್ವರ ಮಹಾಸ್ವಾಮಿಗಳು, ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಇದ್ದರು. 
ನ್ಯೂಸ್

ಶರಣಮುತ್ಯಾ ಜಾತ್ರೆ ಪೋಸ್ಟರ್​ ಬಿಡುಗಡೆ

Vijayapura - Desk - Shamarao Kulkarni

ತಾಳಿಕೋಟೆ: ಪಟ್ಟಣದ ಶ್ರೀ ಸದ್ಗುರು ಸಾಂಭ ಪ್ರಭು ಶರಣಮುತ್ಯಾ ಜಾತ್ರೆ ನಿಮಿತ್ತ ಮಾರ್ಚ್​ 19 ರಂದು ರಥೋತ್ಸವ ಜರುಗಲಿದ್ದು, ಜಾತ್ರೆ ಮಾಹಿತಿಯನ್ನೊಳಗೊಂಡ ಪೋಸ್ಟರನ್ನು ಶ್ರೀ ಸಾಂಭಪ್ರಭು ಶರಣರ ಮುತ್ಯಾ ಬುಧವಾರ ಬಿಡುಗಡೆಗೊಳಿಸಿದರು.

ಯಾದಗಿರಿ ಜಿಲ್ಲಾ ವಾಲ್ಮೀಕಿ ಸಂದ ಗೌರವಾಧ್ಯ ಸಿದ್ಧನಗೌಡ ಪೊಲೀಸ್​ ಪಾಟೀಲ ಮಾತನಾಡಿ, ಶರಣ ಮುತ್ಯಾರವರ ಜಾತ್ರೋತ್ಸವ ಹಲವು ವರ್ಷಗಳಿಂದ ಜರುಗುತ್ತಿದೆ. ವಿಜಯಪುರ ಜಿಲ್ಲೆ ಅಲ್ಲದೆ ಯಾದಗಿರಿ ಜಿಲ್ಲೆ ಒಳಗೊಂಡು ವಿವಿಧ ಪ್ರಮುಖ ನಗರ, ಪಟ್ಟಣಗಳಿಂದ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.

ಶ್ರೀ ಮಠದ ಶರಣಪ್ಪಮುತ್ಯಾ ಶರಣರು ಸಾನ್ನಿಧ್ಯ ವಹಿಸಿ, ಮಾ. 1 ರಿಂದ 18ರ ವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ಶರಣ ಮುತ್ಯಾರ ದೇವಸ್ಥಾನದ ಆವರಣದಲ್ಲಿ ಶ್ರೀ ಪವಾಡ ಬಸವೇಶ್ವರರ ಮಹಾ ಪುರಾಣ ಜರುಗಲಿದೆ.

ಸೋಮನಾಳದ ಮಹಾದೇವಯ್ಯ ಸ್ವಾಮಿಗಳು ಪುರಾಣ ನಡೆಸಿಕೊಡುವರು. ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಸಂಗೀತ ಸಾಥ್​ ನೀಡುವರು ಎಂದು ಹೇಳಿದರು.

18 ರಂದು ಶ್ರೀ ಮಠದಲ್ಲಿ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ಕರಿಭಾವಿ ಗ್ರಾಮದ ಸಕಲ ಸದ್ಭಕ್ತರಿಂದ ನಂದಿಕೋಲ ಶರಣ ಮುತ್ಯಾರ ಮಠಕ್ಕೆ ಆಗಮಿಸುತ್ತದೆ. 19 ರಂದು ಪುರವಂತರ ಸೇವೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದವರೆಗೆ ಜರುಗಲಿದೆ. ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ ಎಂದರು.

ಬಸಣ್ಣ ಶರಣರು, ಭೀಮಣ್ಣ ಇಂಗಳಗಿ, ಮಲ್ಲಣ್ಣ ಇಂಗಳಗಿ, ಶಾಂತಗೌಡ ಬಿರಾದಾರ, ಅಡಿವೆಪ್ಪಗೌಡ ಮಾಲಿಪಾಟೀಲ, ಕಾಶಿರಾಯ ದೇಸಾಯಿ, ಶಿವನಗೌಡ ಮಾಲಿಪಾಟೀಲ, ಸಂಗನಗಬಸಪ್ಪ ದರಿ, ತಿಪ್ಪಣ್ಣ ಸಜ್ಜನ, ಶರಣಪ್ಪ ಸಜ್ಜನ, ಗುರಲಿಂಗಪ್ಪ ಸಜ್ಜನ, ಸಿ.ಆರ್​. ಕತ್ತಿ, ಈರಣ್ಣ ಶರಣರ, ಮಲ್ಲಣ್ಣ ಶರಣರ, ಸಿದ್ದಣ್ಣ ಶರಣರ, ಲಿಂಗರಾಜ ಶರಣರ, ಈಸುಗೌಡ ನಾಡಗೌಡ, ಶ್ರೀಕಾಂತ ಕುಂಬಾರ ಉಪಸ್ಥಿತರಿದ್ದರು.