ಬಾಕಿ ಹಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ವಿಜಯಪುರದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ್​ ಅವರಿಗೆ ಮನವಿ ಸಲ್ಲಿಸಿದರು. ಐ.ಎಂ. ಪಟ್ಟಣಶೆಟ್ಟಿ, ಸಿ.ಆರ್​. ರೂಢಗಿ, ಅರುಣ ಮಠ ಮತ್ತಿತರರಿದ್ದಾರೆ. 
ನ್ಯೂಸ್

ಶ್ರೀ ಬಾಕಿ ಹಣ ಪಾವತಿಸಲು ಆಗ್ರಹಿಸಿ ಪ್ರತಿಭಟನೆ

ವಿಜಯಪುರ: ಬಾಕಿ ಹಣ ಪಾವತಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ನೀತಿ ಖಂಡಿಸಿ ಜಿಲ್ಲಾ ಗುತ್ತಿಗೆದಾರರ ಸಂದ ನೇತೃತ್ವದಲ್ಲಿ ನೂರಾರು ಗುತ್ತಿಗೆದಾರರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಿದ್ಧೇಶ್ವರ ದೇವಸ್ಥಾನ ಬಳಿ ಸೇರಿದ ಗುತ್ತಿಗೆದಾರರರು ಬೇಕೆ ಬೇಕು ಪೇಮೆಂಟ್​ ಬೇಕು, ವೀ ವಾಂಟ್​ ಪೇಮೆಂಟ್​ ಎಂಬ ಪೋಸ್ಟರ್​ ಪ್ರದರ್ಶಿಸಿದರಲ್ಲದೆ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಟಿ. ಭೂಬಾಲನ್​ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಗುತ್ತಿಗೆದಾರರ ಸಂದ ಪ್ರಧಾನ ಕಾರ್ಯದರ್ಶಿ ಐ.ಎಂ. ಪಟ್ಟಣಶೆಟ್ಟಿ ಮಾತನಾಡಿ, ಕಳೆದ 2&3 ವರ್ಷಗಳಿಂದ ಗುತ್ತಿಗೆದಾರರು ಸರ್ಕಾರದ ವಿವಿಧ ಇಲಾಖೆಗಳಾದ ಲೋಕೋಪಯೋಗಿ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ, ಚಿಕ್ಕ ನೀರಾವರಿ, ಪಾಲಿಕೆ, ಪಟ್ಟಣ ಪಂಚಾಯಿತಿ ಸೇರಿ ಹಲವಾರು ರೀತಿಯ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಿದ ಕಾಮಗಾರಿಗಳ ಹಣ ಪಾವತಿ ವಿಳಂಬವಾಗುತ್ತ ಬಂದಿದೆ. ಇನ್ನೂವರೆಗೂ ಬಾಕಿ ಬಿಲ್​ ಪಾವತಿಯಾಗಿಲ್ಲ. ಹೀಗಾಗಿ, ಗುತ್ತಿಗೆದಾರರು ಆರ್ಥಿಕವಾಗಿ ತೀವ್ರ ತೊಂದರೆಗೆ ಸಿಲುಕಿದ್ದಾರೆ ಎಂದರು.

ಕಾಮಗಾರಿಗಳಿಗೆ ಬೇಕಾದ ಕಚ್ಚಾ ವಸ್ತುಗಳ್ನು ಪೂರೈಸಿದವರು ಹಾಗೂ ಸಾಲ ನೀಡಿದ ಬ್ಯಾಂಕ್​, ಸ್ವಸಹಾಯ ಸಂ ಹಾಗೂ ವೈಯಕ್ತಿವಾಗಿ ಕೈಗಡ ಪಡೆದ ಸಾಲ ಕೊಟ್ಟವರೂ ಬಾಕಿ ಹಣ ಪಾವತಿಸಲು ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಈಗಾಗಲೇ ಸುಮಾರು ನಾಲ್ಕೆದು ಜನ ಗುತ್ತಿದಾರರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಸದ್ಯ ಟನೆಗಳು ಮತ್ತೆ ಮರಕಳಿಸಲು ಆಸ್ಪದ ಕೊಡಬಾರದು. ಬಾಕಿ ಹಣ ಬಿಡುಗಡೆ ಕುರಿತು ಹಲವು ಬಾರಿ ವಿಧಾನ ಸಭಾ ಕಲಾಪದಲ್ಲಿಯೂ ಚರ್ಚೆ ನಡೆದಿದ್ದು, ಮನವಿ ಕೂಡ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು.

ಸರ್ಕಾರ ಫೆಬ್ರವರಿ ಅಂತ್ಯದೊಳಗೆ ನಮ್ಮ ಬೇಡಿಕೆ ಈಡೇರಿಸದಿದ್ದರೆ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಅಲ್ಲದೆ, ಆತ್ಮಹತ್ಯೆಯಂತಹ ನಿರ್ಧಾರಗಳು ಕೈಗೊಂಡರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.

ಸಂದ ಅಧ್ಯಕ್ಷ ಸಿ.ಆರ್​. ರೂಢಗಿ, ಗೌರವಾಧ್ಯಕ್ಷ ಅರುಣ ಮಠ, ಕಾರ್ಯಾಧ್ಯಕ್ಷ ಎಸ್​.ಆರ್​. ಡೋಣೂರಮಠ, ಉಪಾಧ್ಯಕ್ಷ ಎಚ್​.ಆರ್​. ಚಿಂಚಲಿ, ಕಾರ್ಯದರ್ಶಿ ಸುನೀಲ ಉಳ್ಳಾಗಡ್ಡಿ, ತಾಂತ್ರಿಕ ಸಲಹೆಗಾರ ಎಲ್​.ಡಿ. ಮಡಗೊಂಡ, ಗುರು ಕವಲಗಿ, ರಮೇಶಗೌಡ ಪಾಟೀಲ, ಅರುಣಕುಮಾರ ನರಸರಡ್ಡಿ, ಮುತ್ತು ಮುಂಡೇವಾಡಿ, ಸುರೇಶಗೌಡ ಪಾಟೀಲ, ಎಂ.ಆರ್​. ತಾಂಬೋಳೆ, ಸುಜಿತ ಬಿಜ್ಜಲಬಾವಿ, ಸಿದ್ದು ಬಿರಾದಾರ, ಶ್ಯಾಮ ಪಾತ್ರದ, ಜೆ.ಜಿ. ಕಲ್ಲೂರ, ಆರ್​.ಎಂ. ಮಾವಿನಗಿಡದ, ಎ.ಎಸ್​. ಬಿರಾದಾರ, ಆರ್​.ಬಿ. ನಂದ್ಯಾಗೋಳ, ಎಸ್​.ಸಿ. ಚಿಕ್ಕರಡ್ಡಿ, ಬಿ.ಎಸ್​. ಬಿರಾದಾರ, ಎನ್​.ವಿ. ಕುಲಕರ್ಣಿ, ಎಸ್​.ಎಸ್​. ಆಲೂರ, ಎಸ್​.ಟಿ. ಬಿಜ್ಜಲಬಾವಿ, ಎ.ಎಸ್​. ಪಾಟೀಲ, ಪ್ರವಿಣ ಹಿರೇಮಠ, ಸಿ.ಆರ್​. ಗಂಗಾಧರ, ಉಮೆಶ ಮೆಟಗಾರ, ಸಂಜು ಜತ್ತಿ, ಡಿ.ಜಿ. ಬಿರಾದಾರ, ರವೀಂದ್ರ ಬಿಜ್ಜರಗಿ, ಎಸ್​.ಎಸ್​. ಸಿರಾಡೋಣ, ಶಿವು ಗದಿಗೆಪ್ಪಗೌಡ, ಸುಭಾಸ ಪಾಟೀಲ, ರಾಜು ಪದ್ಮಣ್ಣವರ ಮತ್ತಿತರರಿದ್ದರು.