ತಾಳಿಕೋಟೆ: ತಾಲೂಕಿನ ಪಡೇಕನೂರ ದಾಸೋಹ ವಿರಕ್ತ ಮಠದ ಜಾತ್ರೆ ನಿಮಿತ್ತ ಸಾಮೂಹಿಕ ವಿವಾಹ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
17ರಿಂದ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರಾರಂಭಗೊಳ್ಳಲಿದ್ದು, ನಿತ್ಯ ರಾತ್ರಿ 7.30 ರಿಂದ 9ರ ವರೆಗೆ ಮಾತೋಶ್ರೀ ಸಾವಿತ್ರಮ್ಮ ಪುರಾಣ ನಡೆಸಿಕೊಡುವರು. 20 ರಂದು ಬೆಳಗ್ಗೆ 6ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ, ಲಿಂಗ ದೀೆ , 21ರಂದು ಸಂಜೆ 6ಕ್ಕೆ ಮುತೆದಿಯರಿಗೆ ಉಡಿ ತುಂಬುವ ಕಾರ್ಯಕ್ರಮ, 25ರಂದು ವಿಜಯಪುರದ ಅನುಗ್ರಹ ಆಸ್ಪತ್ರೆಯ ತವೈದ್ಯ ಡಾ. ಪ್ರಭುಗೌಡ ಲಿಂಗದಳ್ಳಿ ನೇತೃತ್ವ್ವದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಲಿದೆ.
26 ರಂದು ಬೆಳಗ್ಗೆ 6ಕ್ಕೆ ಮಹಾರುದ್ರಾಭಿಷೇಕ, ಮಹಾ ಗಣಯ ಹೋಮ, 10.30ಕ್ಕೆ ಮಾನವ ಏಕತಾ ಧರ್ಮಸಭೆ ಹಾಗೂ ಉಚಿತ ಸಾಮೂಹಿಕ ವಿವಾಹ ಜರುಗಲಿದೆ.
ಇಂಗಳೇಶ್ವರ ವಿರಕ್ತಮಠದ ಶ್ರೀಚನ್ನಬಸವ ಸ್ವಾಮೀಜಿ, ಮಸಬಿನಾಳದ ದಾಸೋಹ ಸಂಸ್ಥಾನಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ, ವಡವಡಗಿ ನಂದಿಮಠದ ವೀರಸಿದ್ಧ ಸ್ವಾಮಿಗಳು ನೇತೃತ್ವ, ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು.
ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು, ವಿಶ್ವನಾಥ ಸ್ವಾಮೀಜಿ, ಜಾಗೀರದಾರಮಠ, ರಾಮಲಿಂಗ ಶ್ರೀ, ಡಾ. ಗುರುಮೂರ್ತಿ ದೇವರು, ಮಹಾಲಿಂಗಯ್ಯ ಸ್ವಾಮೀಜಿ, ಮಾತೆ ಮಹಾಲಿಂಗಮ್ಮ ಉಪಸ್ಥಿತರಿರುವರು.
27ರಂದು ಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಬೆಳಗ್ಗೆ 7ಕ್ಕೆ ಪುರವಂತರ ಸೇವೆಯೊಂದಿಗೆ ಡೊಳ್ಳು, ಕುಂಭಮೇಳದೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆೆ ಮಹಾ ರಥೋತ್ಸವ ನಡೆಯಲಿದೆ. ರಾತ್ರಿ 10ಕ್ಕೆ ಮದ್ದು ಸುಡುವ ಕಾರ್ಯಕ್ರಮ ನಂತರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಸಾಮೂಹಿಕ ವಿವಾಹದಲ್ಲಿ ಹೆಸರು ನೋಂದಾಯಿಸಲು ಮೊ: 9901477400, 7760870937 ಸಂಪರ್ಕಿಸಲು ಕೋರಲಾಗಿದೆ.