ಐನಾಪುರ ಸಮೀಪದ ಆರ್​.ಜಿ.ಮೆಮೊರಿಯಲ್​ ಸ್ಕೂಲ್​ನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಉದ್ಘಾಟಿಸಿದರು. ಪ್ರಕಾಶ್​ ರಾಥೋಡ, ರಾಜುಗೌಡ ಪಾಟೀಲ ಇತರರಿದ್ದರು. 
ನ್ಯೂಸ್

ಮೌಲ್ಯಾಧರಿತ ಶಿಕ್ಷಣ ಸಿಗುವಂತಾಗಲಿ

Vijayapura - Desk - Shamarao Kulkarni

ಐನಾಪೂರ: ಮಕ್ಕಳಿಗೆ ಮೌಲ್ಯಾಧರಿತ ಶಿಕ್ಷಣ ಸಿಗುಂತಾಗಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಆರ್​.ಜಿ. ಮೆಮೊರಿಯಲ್​ ಸ್ಕೂಲ್​ ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಗುರುಕುಲ ಪದ್ಧತಿ ಶಿಣ, ಉತ್ತಮ ಸಂಸ್ಕಾರ, ದೇಶ ಪ್ರೇಮ, ತಂದೆ&ತಾಯಿ ಗೌರವಿಸುವುದು ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಬೇಕು ಎಂದರು.

ಸಂಸ್ಥೆ ಅಧ್ಯಕ್ಷ ಪ್ರಕಾಶ್​ ರಾಥೋಡ, ರಾಜುಗೌಡ ಪಾಟೀಲ(ನಾಧ) ಜಿ.ಎಂ. ರಾಠೋಡ, ಬಾಬು ಹಿಪ್ಪರಗಿ, ದಶರತ್ನಾಯಕ, ಉತ್ತಮ್​ ಸುಸಲಾದಿ, ಜಗದೀಶ ಇಂಡಿ, ಜೆ.ಆರ್​. ಬಂಡಿ, ಇಬ್ರಾಹಿಂ ವಡಗೇರಿ, ಮಲ್ಲಿಕಾರ್ಜುನ ಹಳ್ಳದ ಪಾಲ್ಗೊಂಡಿದ್ದರು