ಪಟ್ಟಣದ ಶಾಲಿನಿತಾಯಿ ಮಾಣಿಕ ಚಂದ ದೋಶಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕೀರಣದಲ್ಲಿ ಶಿವಶಂಕರ ಮೂರ್ತಿ ಮಾತನಾಡಿದರು. 
ನ್ಯೂಸ್

ದುಡಿದರೆ ಭೂಮಾತೆ ಕೈ ಕೊಡುವುದಿಲ್ಲ

Vijayapura - Desk - Shamarao Kulkarni

ಇಂಡಿ: ಶ್ರಮವಹಿಸಿ ದುಡಿದರೆ ಭೂಮಾತೆ ಕೈಕೊಡುವುದಿಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಶಂಕರಮೂರ್ತಿ ಹೇಳಿದರು.

ಪಟ್ಟಣದ ಶಾಲಿನಿತಾಯಿ ಮಾಣಿಕ ಚಂದ ದೋಶಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಮಾನವ ವಿಕಾಸ ಕೇಂದ್ರ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿಯಲ್ಲಿ ಕೃಷಿಯಾಧಾರಿತ ಮಹಿಳಾ ಕೌಶಲ ಮಹತ್ವ ವಿಚಾರ ಸಂಕೀರಣದಲ್ಲಿ ಮಾತನಾಡಿದರು.

ರೈತರ ಕಲ್ಯಾಣದಲ್ಲಿ ದೇಶದ ಕಲ್ಯಾಣ ಅಡಗಿದೆ. ರೈತರ ಪರ ಅಗತ್ಯ ಯೋಜನೆ ರೂಪಿಸಿ ಪರಿಣಾಮಕಾರಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದರು.

ಪ್ರಾಚಾರ್ಯ ಎ.ಬಿ.ಪಾಟೀಲ, ಶಾಂತೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್​.ಎಂ.ಎಮ್ಮಿ, ಎಸ್​.ಬಿ.ಹಡಪದ, ವಿಜಯ ರಾಠೋಡ, ಸದಾನಂದ ಈರನಕೇರಿ ಮಾತನಾಡಿದರು.

ಆರ್​.ಎಸ್​.ಬಿರಾದಾರ, ವಾಣಿ ಹಿರೇಮಠ, ಜ್ಞಾನೇಶ್ವರ ಧೂಳಖೇಡ, ಆರ್​.ಜಿ.ಪೂಜಾರಿ, ಆರ್​.ವಿ.ಅಂಗಡಿ ಇದ್ದರು.