ಇಂಡಿ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲೆಯ ಉದ್ದಿಮೆದಾರರು ಮತ್ತು ತರಬೇತುದಾರರಿಗೆ ಹಮ್ಮಿಕೊಂಡ ಪಿಎಂ ಇಂರ್ಟನ್​ಶಿಪ್​ ಯೋಜನೆಯ ಕುರಿತು ಕಾರ್ಯಾಗಾರದಲ್ಲಿ ದಯಾನಂದ ಬಿರಾದಾರ ಮಾತನಾಡಿದರು.ಪಿ.ವೈ.ರಜನಿಕರ, ಎ.ಕೆ.ಚವ್ಹಾಣ, ಎಂ.ಆರ್​.ಸೂವಿಮಠ, ಪಿ.ಬಿ.ಉಪ್ಪಾರ, ಎಸ್​.ಕೆ.ಬಡಿಗೇರ ಇದ್ದರು.  
ನ್ಯೂಸ್

ವೃತ್ತಿ ಜಿವನ ನಿರ್ಮಿಸಲು ಅತ್ಯುತ್ತಮ ಅವಕಾಶ

Vijayapura - Desk - Shamarao Kulkarni

ಇಂಡಿ: ಪಿಎಂ ಇಂರ್ಟನ್​ಶಿಪ್​ ಯೋಜನೆ ಯುವಕರಿಗೆ ಪ್ರಾಯೋಗಿಕ ಅನುಭವ ಪಡೆಯಲು ಮತ್ತು ವೃತ್ತಿ ನಿರೀೆ ಹೆಚ್ಚಿಸಲು ಅತ್ಯುತ್ತಮ ಅವಕಾಶ ಎಂದು ವಿಜಯಪುರದ ಬಿಜ್ಜರಗಿ ಮೋಟಾರ್ಸ್​ನ ಮಾನವ ಸಂಪನ್ಮೂಲ ಅಧಿಕಾರಿ ದಯಾನಂದ ಬಿರಾದಾರ ಹೇಳಿದರು.

ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜಿಲ್ಲೆಯ ಉದ್ದಿಮೆದಾರರು ಮತ್ತು ತರಬೇತುದಾರರಿಗೆ ಹಮ್ಮಿಕೊಂಡಿದ್ದ ಪಿಎಂ ಇಂರ್ಟನ್​ಶಿಪ್​ ಯೋಜನೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಈ ಯೋಜನೆಯು ಉದ್ಯಮದ ಅನುಭವ, ಕೌಶಲ ಅಭಿವೃದ್ಧಿ ಮತ್ತು ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವ ಅವಕಾಶ ನೀಡುತ್ತದೆ. ರಚನಾತ್ಮಕ ಕಲಿಕಾ ವಾತಾವರಣದೊಂದಿಗೆ, ಇದು ಯಶಸ್ವಿ ವೃತ್ತೀಜಿವನ ನಿರ್ಮಿಸಲು ಪರಿಪೂರ್ಣ ಸಹಕಾರಿಯಾಗಿದೆ ಎಂದರು.

ಪ್ರಾಚಾರ್ಯ ಪಿ.ವೈ. ರಜನಿಕರ ಮಾತನಾಡಿ, ಇಂದಿನ ಯುವಕರು ವಿವಿಧ ವೃತ್ತಿ ಮತ್ತು ಉದ್ಯೋಗಾವಕಾಶಗಳಲ್ಲಿ ನಿಜ ಜೀವನದ ವ್ಯವಹಾರ ವಾತಾವರಣಕ್ಕೆ ಒಡ್ಡಿಕೊಳ್ಳಬೇಕು. ಈ ಯೋಜನೆಯು ಯುವಕರಿಗೆ ಉಪಯುಕ್ತವಾಗಿದೆ ಎಂದು ಹೇಳಿದರು.

ವಿವಿಧ ಐಟಿಐ ಕಾಲೇಜುಗಳ ಪ್ರಾಚಾರ್ಯರಾದ ಎ.ಕೆ. ಚವ್ಹಾಣ, ಎಂ.ಆರ್​. ಸೂವಿಮಠ, ಪಿ.ಬಿ. ಉಪ್ಪಾರ, ಎಸ್​.ಕೆ. ಬಡಿಗೇರ, ಆರ್​.ಎಸ್​. ಪೊದ್ದಾರ, ಎಸ್​.ಜಿ. ಭಂಟನೂರ, ಎ.ಜಿ. ಗೌಡಗಾವಿ, ವೈ.ಎಸ್​. ಪೂಜಾರಿ, ಸಂತೋಷ ಇಂಗಳೆ, ಉಪನ್ಯಾಸಕರಾದ ರಮೇಶ ಮೇತ್ರಿ, ಸಂತೋಷ ಜಾಧವ, ಪ್ರೇಮಾನಂದ ದೇಸಾಯಿ ಉಪಸ್ಥಿತರಿದ್ದರು.