ಅಯ್ಯನಗುಡಿ ಕಳಸೋತ್ಸವಕ್ಕೆ ಪ.ಪಂ ಅಧ್ಯ ಪೃಥ್ವಿರಾಜ ನಾಡಗೌಡ ಚಾಲನೆ ನೀಡಿದರು. ಬಸವರಾಜ ನಾಡಗೌಡ, ಗಂಗಾಧರ ನಾಡಗೌಡ, ಉಮರ್​ ಾರೂಕ್​ ಮೂಲಿಮನಿ, ಹಣಮಂತರಾಯ ಕುರಿ ಇತರರಿದ್ದರು.  
ನ್ಯೂಸ್

ಅಯ್ಯನಗುಡಿ ಕಳಸೋತ್ಸವಕ್ಕೆ ಚಾಲನೆ

Vijayapura - Desk - Shamarao Kulkarni

ನಾಲತವಾಡ: ಜಾನಪದ ನಾಡೆಂದೇ ಖ್ಯಾತಿ ಪಡೆದಿರುವ ಅಯ್ಯನಗುಡಿ ಜಾತ್ರೆ, ಕಳಸೋತ್ಸವಕ್ಕೆ ನಾಡಗೌಡ ವಾಡೆಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯ ಪೃಥ್ವಿರಾಜ ನಾಡಗೌಡ ಗುರುವಾರ ಚಾಲನೆ ನೀಡಿದರು.

ನಾಡಗೌಡ ವಾಡೆಯಿಂದ ಅಯ್ಯನಗುಡಿ ಗಂಗಾಧರೇಶ್ವರ ದೇವಸ್ಥಾನದ ವರೆಗೆ ಕಳಸೋತ್ಸವ ಮೇರವಣಿಗೆ ನಡೆಯಿತು. ಬಬಲೇಶ್ವರದ ಕರಡಿ ಮಜಲು, ಸಾರವಾಡದ ಕೀಲು ಕುದರೆ ಮತ್ತು ನವಿಲು ಕುಣಿತ, ಕೂಲ್ಹಾರದ ಬಸವನ ಕುಣಿತ, ಸಂಗಮೇಶ ಹೊನ್ನಳಿ ಅವರಿಂದ ಕುದರೆ ಕುಣಿತ, ದಾದಾಪೀರ ಹಡಲಗೇರಿ ಬಳಗದಿಂದ ಜೋಗತಿ ಕುಣಿತ ಮೇರವಣಿಗೆಗೆ ಮೆರಗು ತಂದುಕೊಟ್ಟವು.

ಬಸವರಾಜ ನಾಡಗೌಡ, ಜಿ.ಪಂ ಮಾಜಿ ಸದಸ್ಯ ಗಂಗಾಧರ ನಾಡಗೌಡ, ಪ.ಪಂ ಅಧ್ಯ ಹಾಗೂ ಸದಸ್ಯ ಪೃಥ್ವಿರಾಜ ನಾಡಗೌಡ, ಮಹಾಂತೇಶ ಗಂಗನಗೌಡರ, ಉಮರ್​ ಾರೂಕ್​ ಮೂಲಿಮನಿ, ಹಣಮಂತರಾಯ ಕುರಿ, ಶಿವಪ್ಪಗೌಡ ತಾತರೆಡ್ಡಿ, ದಾವಲಸಾಬ ಸುಲ್ತಾನಪುರ, ಬಲವಂತ ಉಣ್ಣಿಭಾವಿ, ಗನಿಸಾಬ ಖಾಜಿ, ರಜಾಕ ನಾಯ್ಕೊಡಿ, ಈರಣ್ಣ ನಾಡಗೌಡ, ಲಾಳೇಮಶಾಕ ಅವಟಿ, ರಸೂಲ ಮಕಾಂದಾರ, ಸಂಗಮೇಶ ಗಂಗನಗೌಡರ, ಬಾಬು ತ್ರಿ ಹಾಗೂ ಭಕ್ತರು ಪಾಲ್ಗೊಂಡಿದ್ದರು