ವಿಜಯಪುರ:ಡಾ.ಎಸ್.ಕೆ.ಕೊಪ್ಪ್ಪ ಅವರ ಬದುಕು& ಸಾಹಿತ್ಯವು ನಾಡಿನ ಜನತೆಗೆ ಸಂದೇಶ ನೀಡುವಂತಹದು. ಅವರ ಶೋಧಿತ ಕೃತಿಗಳು ಶಾಸನ, ಸಂಶೋಧನೆ, ಸಂಸತಿ ಮತ್ತು ಹೋರಾಟದ ಅಂಶಗಳನ್ನೊಳಗೊಂಡಿರುತ್ತವೆ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಶಿವಮೂರ್ತಿ ಹೇಳಿದರು. ನಗರದ ಡಾ..ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಡಾ.ಎಸ್.ಕೆ.ಕೊಪ್ಪ ಮಾತನಾಡಿ, ಡಾ.ಎಂ.ಎಂ.ಕಲಬುರಗಿ, ಪ್ರೊ. ಎ.ಎಸ್.ಹಿಪ್ಪರಗಿ, ಪ್ರೊ. ಎನ್.ಜಿ.ಕರೂರಂತವರಿಂದ ಹೆಚ್ಚು ಕಲಿಯಲು ಸಾಧ್ಯವಾಯಿತು. ಪರಿಸರವು ಕೂಡಾ ನನಗೆ ಅಧ್ಯಯನ ಮಾಡಲು ಅನುಕೂಲಕರವಾಗಿತ್ತು ಎಂದರು.
ಡಾ.ಗುರುಪಾದ ಮರಿಗುದ್ದಿ, ಡಾ.ಎಂ.ಎಂ.ಪಡಶೆಟ್ಟಿ, ಡಾ.ಕೃಷ್ಣ್ಣಾ ಕೊಲ್ಹಾರ ಕುಲಕರ್ಣಿ, ಡಾ.ರವೀಂದ್ರನಾಥ.ಕೆ.ಮಾತನಾಡಿದರು.
ಡಾ.ಸಿದ್ದಣ್ಣ ಉತ್ನಾಳ, ಡಾ.ಎಂ.ಎಸ್.ಮಾಗಣಗೇರಿ, ಡಾ.ಉಷಾದೇವಿ ಹಿರೇಮಠ, ಡಾ.ವಿ.ಎಂ.ಬಾಗಾಯತ, ಡಾ.ಚೈತನಾ ಸಂಕೊಂಡ, ಶಾರದಾ ಐಹೊಳ್ಳಿ, ಡಾ.ವಿ.ಡಿ.ಐಹೊಳ್ಳಿ, ಪ್ರೊ. ಎನ್.ಜಿ.ಕರೂರ, ವಿ.ಸಿ.ನಾಗಠಾಣ, ಸಹದೇವ ನಾಡಗೌಡ, ಪ್ರೊ. ಎನ್.ಬಿ.ದೊಡಮನಿ, ಎಸ್.ಎನ್.ಶಿವಣಗಿ, ಎಸ್.ವೈ.ಗದಗ, ಮಹಾದೇವ ಹಾಲಳ್ಳಿ, ಕೆ.ಎಸ್.ಬಿರಾದಾರ, ಸುಭಾಷ್ ಕನ್ನೂರ, ಕಣಬೂರ, ಸಕ್ರಿ, ಎನ್.ಕೆ.ಕುಲಕರ್ಣಿ, ಪಿ.ಎಸ್.ಕನಮಡಿ, ಡಾ. ಶಿರಹಟ್ಟಿ, ಎಸ್.ಎಸ್.ಮಜ್ಜಗಿ, ಎಂ.ಐ.ಮದಭಾವಿ, ಡಾ.ಎಸ್.ಎಸ್.ತರಡಿ ಉಪಸ್ಥಿತರಿದ್ದರು.
ಬಿ.ಎಂ.ಪಾಟೀಲ ವಚನಗಾಯನ ಮಾಡಿದರು. ಡಾ. ಎಂ.ಎಸ್.ಮದಭಾವಿ ಪ್ರಾಸ್ತಾವಿಕ ಮಾತನಾಡಿದರು. ಮನು ಪತ್ತಾರ ವಂದಿಸಿದರು. ಪ್ರೊ. ಅಮರೇಶ ಸಾಲಕ್ಕಿ ನಿರೂಪಿಸಿದರು.