ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಗತಿ ಸಭೆಯಲ್ಲಿ ಶಂಕರಗೌಡ ಹಿರೇಗೌಡ್ರ ಮಾತನಾಡಿದರು.  
ನ್ಯೂಸ್

ಬಾಕಿ ಉಳಿದ ಅರ್ಜಿ ಪರಿಶೀಲಿಸಿ

Vijayapura - Desk - Shamarao Kulkarni

ನಾಲತವಾಡ: ಬಡವರ ಕಲ್ಯಾಣಕ್ಕಾಗಿ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿ ಬಾಕಿ ಉಳಿದಿರುವ ಅರ್ಹ ಲಾನುಭವಿಗಳ ನೋಂದಣಿ ಕಾರ್ಯ ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಂಕರಗೌಡ ಹಿರೇಗೌಡ್ರ ಸೂಚಿಸಿದರು.

ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ದೊರಕಿಸಿಕೊಡಬೇಕೆಂದು ತಿಳಿಸಿದರು.

ಸದಸ್ಯ ಬಸವರಾಜ ಚಿನಿವಾರ ಮಾತನಾಡಿ, ಯೋಜನೆ ತಲುಪದ ಲಾನುಭವಿಗಳ ಪಟ್ಟಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದರು.

ಸದಸ್ಯ ಹನುಮಂತ ಕುರಿ ಮಾತನಾಡಿ, ಹಲವು ಗ್ರಾಮ ಪಂಚಾಯಿತಿಗಳಲ್ಲಿ ಮರಣ ಪ್ರಮಾಣ ಪತ್ರ ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದರು.

ಸದಸ್ಯರಾದ ಲಕ್ಷ$್ಮಣ ಲಮಾಣಿ, ಬುಡ್ಡೇಸಾ ಚಪ್ಪರಬಂದ, ತಾಪಂ ಇಒ ಕುಂಬಾರ, ಪಂಚ ಗ್ಯಾರಂಟಿ ತಾಲೂಕು ಸದಸ್ಯರಾದ ಪಿಂಟು ಸಾಲಿಮನಿ, ಸಂಗಣ್ಣ ಮೇಲಿನಮನಿ, ಸರಸ್ವತಿ ಪೀರಾಪುರ, ಸುಜಾತಾ ಸಿಂಧೆ, ರಾಮಣ್ಣ ರಾಜನಾಳ, ಸಂಗಪ್ಪ ಚಲವಾದಿ, ಗುರುರಾಜ ಬಿರಾದಾರ, ನಾಲತವಾಡ ಪಪಂ ಅಧ್ಯೆ ವಿಜಯಲಕ್ಷಿ$್ಮ ಇಳಕಲ್ಲ, ಉಪಾಧ್ಯ ಬಸವರಾಜ ಗಂಗನಗೌಡ್ರ ಗಡ್ಡಿ, ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಉಪಸ್ಥಿತರಿದ್ದರು.