ವಿಜಯಪುರದ ಶಿವಚಿದಂಬರೇಶ್ವರ ಸಾಂಸತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷೆ ಭಾರತಿ ಪಾಟೀಲ ಚಾರಧಾಮ ಯಾತ್ರೆ ಪುಸ್ತಕ ಬಿಡುಗಡೆ ಮಾಡಿದರು. ಮಹಾಂತೇಶ ಯರಂತೆಲಿಮಠ, ಚಂದ್ರಶೇಖರ ಗಂಟೆಪ್ಪಗೋಳ ಇತರರಿದ್ದರು.  
ನ್ಯೂಸ್

ಚಾರಧಾಮ ಯಾತ್ರೆ ಪುಸ್ತಕ ಬಿಡುಗಡೆ

ವಿಜಯಪುರ: ನಗರದ ಶಿವಚಿದಂಬರೇಶ್ವರ ಸಾಂಸತಿಕ ಭವನದಲ್ಲಿ ಮಹಾಂತೇಶ ಯರಂತೆಲಿಮಠ ಅವರ ಪ್ರವಾಸ ಕಥನ ಚಾರಧಾಮ ಯಾತ್ರೆ ಬಿಡುಗಡೆಗೊಳಿಸಲಾಯಿತು.

ಹಿರಿಯ ಸಾಹಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷೆ ಭಾರತಿ ಪಾಟೀಲ ಮಾತನಾಡಿ, ಪುಸ್ತಕ ಓದುವುದರಿಂದ ಸಿಗುವಷ್ಟು ಜ್ಞಾನ ಪ್ರವಾಸ ಮಾಡುವುದರಿಂದಲೂ ಸಿಗುತ್ತದೆ. ಚಾರಧಾಮ, ವೈಷ್ಣೋದೇವಿ, ಸೋಮನಾಥದಂಥ ಜ್ಯೋರ್ತಿಲಿಂಗಗಳ ದರ್ಶನಕ್ಕಾಗಿ ಯಾತ್ರೆ ಮಾಡುವುದರಿಂದ ಅಧ್ಯಾತ್ಮದತ್ತ ಒಲವು ಗಳಿಸಬಹುದೆಂದರು.

ನಿವೃತ್ತ ಶಿಕ ಕಣಕಾಲಮಠ ಅಧ್ಯತೆ ವಹಿಸಿದ್ದರು. ಶ್ರೀದೇವಿ, ವಾಣಿಶ್ರೀ ಪ್ರಾರ್ಥಿಸಿದರು. ಲೇಖಕ ಮಹಾಂತೇಶ ಯರಂತೆಲಿಮಠ ಸ್ವಾಗತಿಸಿದರು. ಸಾಹಿತಿ ಮಹಾದೇವ ರಬಿನಾಳ ಪುಸ್ತಕ ಪರಿಚಯಿಸಿದರು, ಅಕ್ಕಮಹಾದೇವಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಉಮಾ ವಂದಿಸಿದರು. ಕಾರ್ಮಿಕ ಮುಖಂಡ ಚಂದ್ರಶೇಖರ ಗಂಟೆಪ್ಪಗೋಳ ನಿರೂಪಿಸಿದರು.