ಹೊರ್ತಿ: ಭಾರತೀಯ ಭವ್ಯ ಪರಂಪರೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ಬಹಳ ಮಹತ್ವವಿದೆ ಎಂದು ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಹೇಳಿದರು.
ಸ್ಥಳಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಕೋಟಿ ಜಪಯ ಸಮಾರಂಭ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಎಲ್ಲ ಕಡೆ ಶಿವಸ್ಮರಣೆ, ಶಿವಜಪ ಮತ್ತು ಶಿವಪೂಜೆ ಮೂಲಕ ಅಖಂಡ ಶಿವರಾತ್ರಿ ಶಿವಜಾಗರಣೆ ಕಳೆಯುವ ಪುಣ್ಯಸಮಯ. ಪುಣ್ಯೇತ್ರ ಶ್ರೀ ರೇವಣಸಿದ್ಧೇಶ್ವರ ತಪೋಭೂಮಿ ಪುಣ್ಯಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಇಷ್ಟಲಿಂಗ ಪೂಜೆ, ಸಾಮೂಹಿಕ ಕೋಟಿ ಜಪಯದೊಂದಿಗೆ ಆಧ್ಯಾತ್ಮಿಕ ಸಾಧನೆ ಶ್ರೇಷ್ಠ ವಿಧಾನವಾಗಿದೆ. ಆತ್ಮಶುದ್ಧಿ ಮತ್ತು ಮನ@ಶುದ್ಧಿಗಾಗಿ ಮಂತ್ರ ಜಪ ಮಾಡಬೇಕು. ಸಪ್ತಕೋಟಿ ಮಂತ್ರಗಳಲ್ಲಿ ಶಿವಪಂಚಾಕ್ಷರಿ ಮತ್ರ ಶ್ರೇಷ್ಠವಾಗಿದೆ. ಸಾವಿರಾರು ಜನ ಏಕಕಾಲದಲ್ಲಿ ಶಿವಪಂಚಾರಿ ಮಂತ್ರಜಪ ಮೂಲಕ ಶಿವಸಾನ್ನಿಧ್ಯ ಪ್ರಾಪ್ತಿಯಾಗುತ್ತದೆ ಎಂದರು.
ಅಭಿನವ ರಾಚೋಟೇಶ್ವರ ಶಿವಾಚಾರ್ಯರ ತಡವಲಗಾ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರರಾಗಲು ಶಿವರಾತ್ರಿ ಶುಭದಿನವಾಗಿದೆ. ಶಿವನನ್ನು ಭಕ್ತಿ ಪೂರ್ವಕವಾಗಿ ಪೂಜಿಸಿದರೆ ಪಾಪಗಳೆಲ್ಲವೂ ಪರಿಹಾರವಾಗಿ ಮೋ ಪ್ರಾಪ್ತವಾಗಲಿದೆ ಎಂದು ತಿಳಿಸಿದರು.
ಹಾವಿನಾಳ ಹತ್ತಳ್ಳಿಯ ಗುರುಪಾದ ಶಿವಾಚಾರ್ಯ, ಆಲಮೇಲದ ಚಂದ್ರಶೇಖರ ಶಿವಾಚಾರ್ಯ, ಹಾವಿನಾಳದ ವಿಜಯಮಹಾಂತ ಶಿವಾಚಾರ್ಯ, ಅಥರ್ಗಾದ ಮುರುಘೇಂದ್ರ ಮಹಾಸ್ವಾಮೀಜಿ, ಕಮಿಟಿ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ, ಬಿ.ಡಿ. ಪಾಟೀಲ, ಗುರುನಗೌಡ ಪಾಟೀಲ, ಅರವಿಂದ ಪೂಜಾರಿ, ಶ್ರೀಮಂತ ಇಂಡಿ, ಗೋಪಾಲ ದೇಶಪಾಂಡೆ, ನಾಗುಗೌಡ ಪಾಟೀಲ, ರಮೇಗೌಡ ಬಿರಾದಾರ, ಮಲ್ಲಣ ಸಕ್ರಿ, ಶಿವಾನಂದ ಮೇತ್ರಿ, ರೇವಣಸಿದ್ಧ ಮಖಣಾಪೂರ, ಸಿದರಾಯ ಕುಂಬಾರ, ರಾಜು ರಾಠೋಡ, ಎಸ್. ಆರ್. ರುದ್ರವಾಡಿ, ಅಶೋಕ ತಳಕೇರಿ, ಲಚ್ಚಪ್ಪ ತಸಳಿಕೇರಿ, ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಕೋಟಿ ಜಪ ಮಂತ್ರದಲ್ಲಿ ಭಾಗವಹಿಸಿದ್ದರು.