ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್, ಸಬಾ ಅಜಾದ್ ಜೊತೆಗೆ ಪ್ರೀತಿಯಲ್ಲಿರುವ ವಿಚಾರ ಗೊತ್ತೆ ಇದೆ. ಒಟ್ಟಿಗೆ ಓಡಾಡುವ ಈ ಜೋಡಿ ಇದೀಗ ಸಾರ್ವಜನಿಕವಾಗಿಯೇ ಲಿಪ್ ಕಿಸ್ ಮಾಡಿ ಅಚ್ಚರಿ ಮೂಡಿಸಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಬಾ ಅಜಾದ್‌ಗೆ ಹೃತಿಕ್ ಕಿಸ್ ಮಾಡಿ ಕಾರಿನಿಂದ ಇಳಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಹೃತಿಕ್ ಮತ್ತು ಸಬಾ ಸದಾ ಒಟ್ಟಿಗೆ ಓಡಾಡುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಸದ್ಯದಲ್ಲೇ ಇಬ್ಬರೂ ಮದುವೆ ಸಹ ಆಗುತ್ತಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಹೃತಿಕ್ ಆಗಲಿ ಅಥವಾ ಸಬಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಹೃತಿಕ್ ಮತ್ತು ಗರ್ಲ್‌ಫ್ರೆಂಡ್ ವಿಡಿಯೋ ವೈರಲ್ ಆಗಿದೆ.
ಹೃತಿಕ್ ರೋಷನ್ ಮತ್ತು ಸಬಾ ಅಜಾದ್ ಇಬ್ಬರೂ ಒಟ್ಟಿಗೆ ಇರಲು ಬಯಸಿದ್ದು ಹೊಸ ಮನೆ ಸಹ ಖರೀದಿಸಿದ್ದಾರೆ. ಫ್ಲೋರ್ ಇರುವ ಅಪಾರ್ಟ್ಮೆಂಟ್ ಅದಾಗಿದ್ದು ಬರೋಬ್ಬರಿ 100 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರಂತೆ ಹೃತಿಕ್.