ನವದೆಹಲಿ: ಲಾಕ್ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುವಂತೆ ಮಾನವ ಸಂಪನ್ಮೂಲ ಸಚಿವಾಲಯ ವಿದ್ಯಾದಾನ್ 2.0ವನ್ನು ಆರಂಭಿಸಿದೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಬುಧವಾರ ಈ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿದರು.
ವಿದ್ಯಾದಾನ್ ಇ- ಲರ್ನಿಂಗ್ ಯೋಜನೆ ಅಧ್ಯಯನ ಸಾಮಗ್ರಿಯನ್ನು ಅಭಿವೃದ್ಧಿಪಡಿಸುವ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಅಧ್ಯಯನ ಸಾಮಗ್ರಿಯನ್ನು ದೀಕ್ಷಾ (DIKSHA) ಅಪ್ಲಿಕೇಷನ್ಗೆ ಒಳಪಡಿಸಬಹುದಾಗಿದ್ದು, ದೇಶಾದ್ಯಂತ ಯಾವುದೇ ಪ್ರದೇಶದಲ್ಲೂ ಯಾವುದೇ ವಿದ್ಯಾರ್ಥಿ ತನ್ನ ಕಲಿಕೆಯನ್ನು ಮುಂದುವರಿಸಬಹುದಾಗಿದೆ ಎಂದು ಮಾನವ ಸಂಪಸ್ಮೂಲ ಸಚಿವರು ತಿಳಿಸಿದರು.‘
ಕೋವಿಡ್ -19 ನಿಂದಾಗಿ ಶಾಲಾ ಶಿಕ್ಷಣ ಸ್ಥಗಿತಗೊಂಡಿರುವುದರಿಂದ ಇ-ಲರ್ನಿಂಗ್ ಅಧ್ಯಯನ ಸಾಮಗ್ರಿಗೆ ಬೇಡಿಕೆ ಹೆಚ್ಚಿದೆ. ಶಾಲಾ ಶಿಕ್ಷಣದೊಂದಿಗೆ ಡಿಜಿಟಲ್ ಶಿಕ್ಷಣವನ್ನು ಸಮನ್ವಯಗೊಳಿಸುವುದೂ ಕೂಡ ಇ-ಲರ್ನಿಂಗ್ ಅಧ್ಯಯನ ಸಾಮಗ್ರಿ ಅಭಿವೃದ್ಧಿಗೆ ಕಾರಣವಾಗಿದೆ.
ಶಿಕ್ಷಣ ತಜ್ಞರು, ವಿಷಯ ತಜ್ಞರು, ಶಾಲೆ, ಕಾಲೇಜುಗಳು, ವಿವಿಗಳು ಹಾಗೂ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಅಧ್ಯಯನ ಸಾಮಗ್ರಿ ಕೊಡುಗೆ ನೀಡಬಹುದು ಎಂದು ತಿಳಿಸಿದ್ದಾರೆ. ದೀಕ್ಷಾ & ಇ-ಲರ್ನಿಂಗ್ ಅಧ್ಯಯನ ಸಾಮಗ್ರಿಗೆ ಸೇರಿಸಬಹುದಾದ (ಸ್ವೀಕಾರಾರ್ಹ) ಕೊಡುಗೆ ನೀಡಿದರೆ ಅಂಥವರ ಕೊಡುಗೆ ಹೆಮ್ಮೆಯ ವಿಷಯವಾಗಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)