ಬೆೆಂಗಳೂರಿನಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಣಿಕಂಠ (ಎಡದಿಂದ ಮೂರನೇಯವನು) ನಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದರು.  
ನ್ಯೂಸ್

ಮಣಿಕಂಠನಿಗೆ ಹೊಯ್ಸಳ ಶೌರ್ಯ ಪ್ರಶಸ್ತಿ

ರಿಪ್ಪನ್‌ಪೇಟೆ: ರಾಜ್ಯ ಸರ್ಕಾರದಿಂದ ನೀಡಲಾಗುವ 2024-25ನೇ ಸಾಲಿನ ಮಕ್ಕಳ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ಬಾಳೂರು ಸರ್ಕಾರಿ ಶಾಲೆಯ 3ನೇ ತರಗತಿ ವಿದ್ಯಾರ್ಥಿ ಮಣಿಕಂಠನಿಗೆ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಕಬ್ಬನ್ ಪಾರ್ಕ್ ಉದ್ಯಾನವನದ ಜವಾಹರ್ ಬಾಲ ಭವನದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಿದರು.

ಶಾಲೆಯಲ್ಲಿ 2023ರ ನ.1ರಂದು ಹೊಸನಗರ ತಾಲೂಕು, ಬಾಳೂರು ಸರ್ಕಾರಿ ಪ್ರಾಥಮಿಕ ಶಾಲೆಯ 2ನೇ ತರಗತಿಯ ಭುವನ ಎಂಬ ವಿದ್ಯಾರ್ಥಿಯ ಬ್ಯಾಗಿನಲ್ಲಿದ್ದ ನಾಗರಹಾವನ್ನು ಕಂಡು ಮಣಿಕಂಠ ಧೈರ್ಯದಿಂದ ಬ್ಯಾಗಿನ ಜಿಪ್‌ಹಾಕಿ ಭುವನನ್ನು ಹಾವಿನಿಂದ ರಕ್ಷಿಸಿದ್ದನು. ಅಂದು ಶಾಲೆ ಆರಂಭವಾಗುತ್ತಿದ್ದಂತೆ ನಲಿ-ಕಲಿ ತರಗತಿ ಶಿಕ್ಷಕ ಪಾಠ ಓದಲು ಸೂಚಿಸಿದಾಗ ಭುವನ ಬ್ಯಾಗ್‌ನಿಂದ ಪುಸ್ತಕ ತೆಗೆಯುವ ಸಂದರ್ಭದಲ್ಲಿ ಬ್ಯಾಗಿನಲ್ಲಿ ಹಾವಿರುವುದನ್ನು ಸ್ನೇಹಿತ ಮಣಿಕಂಠನಿಗೆ ತೋರಿಸಿದ್ದಾನೆ. ತಕ್ಷಣ ಬ್ಯಾಗಿನ ಜಿಪ್ ಎಳೆದು ಹಾವು ಹೊರಗೆ ಬಾರದಂತೆ ತಡೆದು ಶಿಕ್ಷಕರ ಬಳಿ ವಿಷಯ ತಿಳಿಸಿದ್ದ. ಮಣಿಕಂಠನ ಸಮಯ ಪ್ರಜ್ಞೆ ಹಾಗೂ ಧೈರ್ಯವನ್ನು ಶ್ಲಾಘಿಸಿ ಪ್ರಶಸ್ತಿ ನೀಡಲಾಗಿದೆ. ಮಣಿಕಂಠ ಆನೆಕೆರೆ ನಿವಾಸಿ ರವಿ ಮತ್ತು ಲಕ್ಷ್ಮೀ ಅವರ ಪುತ್ರ.