ಐತಿಹಾಸಿಕ ಕ್ರಮವೊಂದರಲ್ಲಿ ಸುಪ್ರೀಂ ಕೋರ್ಟ್ನ 33 ನ್ಯಾಯಮೂರ್ತಿಗಳ ಪೈಕಿ 21 ನ್ಯಾಯಮೂರ್ತಿಗಳು ಸೋಮವಾರ ತಮ್ಮ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಬಹಿರಂಗಪಡಿಸಿದ್ದಾರೆ. ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಎಲ್ಲ ವಿವರಗಳನ್ನು ಪ್ರಕಟಿಸಲಾಗಿದೆ. ಷೇರು, ಮ್ಯೂಚುವಲ್ ಫಂಡ್, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮುಂತಾದವುಗಳಲ್ಲಿ ಯಾರು ಎಷ್ಟು ಹಣ ಹೂಡಿದ್ದಾರೆ, ಯಾರ ಬಳಿ ಎಷ್ಟು ಆಸ್ತಿ ಇದೆ, ಯಾವ್ಯಾವ ಕಾರುಗಳಿವೆ, ಚಿನ್ನ-ಬೆಳ್ಳಿ ಎಷ್ಟಿದೆ ಮುಂತಾದ ಎಲ್ಲ ಮಾಹಿತಿಯೂ ಈಗ ಸಾರ್ವಜನಿಕರಿಗೆ ಲಭ್ಯ. ಆ ಪೈಕಿ ಆಯ್ದ ವಿವರ ಇಲ್ಲಿದೆ.
ಇನ್ನು ಕೆಲ ದಿನಗಳಲ್ಲಿ ನಿವೃತ್ತರಾಗಲಿರುವ ನ್ಯಾ. ಸಂಜೀವ್ ಖನ್ನಾ ಅವರ ಹೂಡಿಕೆ ಒಟ್ಟು 3.4 ಕೋಟಿ ರೂ.ನಷ್ಟಿದೆ. ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಎಂಬುದರ ವಿವರ ಇಲ್ಲಿದೆ. ನ್ಯಾ. ಸಂಜೀವ್ ಖನ್ನಾ ಅವರು ದಕ್ಷಿಣ ದೆಹಲಿಯಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಅಪಾರ್ಟ್ ಮೆಂಟ್ನಲ್ಲಿ 3 ಬೆಡ್ರೂಮ್ಳ ಫ್ಲ್ಯಾಟ್ ಹೊಂದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ವಿಲೇಜ್ನಲ್ಲಿ 2,446 ಚದರಡಿಯ 4 ಬೆಡ್ರೂಮ್ಳ ಫ್ಲ್ಯಾಟ್ ಕೂಡ ಇದೆ. 250 ಗ್ರಾಂ ಚಿನ್ನ 2 ಕೆಜಿ ಬೆಳ್ಳಿ (ಬಹುತೇಕ ಪಿತ್ರಾರ್ಜಿತ ಮತ್ತು ಸಮಾರಂಭಗಳಲ್ಲಿ ಉಡುಗೊರೆಯಾಗಿ ಬಂದದ್ದು) ಆಭರಣಗಳು ಇವೆ. ಒಂದು ಮಾರುತಿ ಸ್ವಿಫ್ಟ್ ಕಾರು ಹೊಂದಿದ್ದಾರೆ.
ಇವರು ಸುಪ್ರೀಂ ಕೋರ್ಟ್ನ ನಿಯೋಜಿತ ಮುಖ್ಯ ನ್ಯಾಯಮೂರ್ತಿ. ಇದೇ 14ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಬ್ಯಾಂಕ್ನಲ್ಲಿ 19.63 ಲಕ್ಷ ರೂ. ಇದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಪಿತ್ರಾರ್ಜಿತ ಮನೆ ಇದೆ. ಮುಂಬೈನ ಬಾಂದ್ರಾ ಮತ್ತು ದೆಹಲಿಯ ಡಿಫೆನ್ಸ್ ಕಾಲನಿಯ ಅಪಾರ್ಟ್ವೆುಂಟ್ಗಳಲ್ಲಿ ಮನೆಗಳಿವೆ. ಅಮರಾವತಿ ಮತ್ತು ನಾಗಪುರದಲ್ಲಿ ಕೃಷಿ ಜಮೀನಿದೆ. ಅವರ ಒಟ್ಟು ಹೂಡಿಕೆ 42 ಲಕ್ಷ ರೂ.; ಒಟ್ಟು ಚರಾಸ್ತಿ ಮೌಲ್ಯ 80 ಲಕ್ಷ ರೂ. ಅವರ ಪತ್ನಿ ಬಳಿ 29.70 ಲಕ್ಷ ರೂ. ಮೌಲ್ಯದ ಆಭರಣಗಳಿವೆ. ನಗದು 61 ಸಾವಿರ ರೂ. ಇದೆ.
ಹೂಡಿಕೆ
ಚರಾಸ್ತಿ
ಹೊಣೆಗಾರಿಕೆ
ಮೇ 24ರಂದು ನಿವೃತ್ತರಾಗಲಿರುವ ನ್ಯಾ. ಅಭಯ್ ಎಸ್. ಓಕ ಮಹಾರಾಷ್ಟ್ರದ ಥಾಣೆಯಲ್ಲಿ ಫ್ಲ್ಯಾಟ್ ಮತ್ತು ಕಟ್ಟಡವೊಂದರ 3ನೇ ಅಂತಸ್ತಿನಲ್ಲಿ ಸ್ವಲ್ಪ ಭಾಗದ ಒಡೆತನ ಹೊಂದಿದ್ದಾರೆ. ಥಾಣೆಯ ಕೃಷಿ ಜಮೀನೊಂದರಲ್ಲಿ ಭಾಗ ಇದೆ. 21.76 ಲಕ್ಷ ರೂ. ಫಿಕ್ಸ್ಡ್ ಠೇವಣಿ ಹೊಂದಿದ್ದಾರೆ. 9.10 ಲಕ್ಷ ರೂ. ಉಳಿತಾಯ ಇದೆ. ಅವರ ಒಟ್ಟು ಹೂಡಿಕೆ 1.3 ಕೋಟಿ ರೂ.ನಷ್ಟಿದೆ.
ಹೂಡಿಕೆ
ಚರಾಸ್ತಿ
ಹೊಣೆಗಾರಿಕೆ
ನ್ಯಾ. ಕೆ.ವಿ. ವಿಶ್ವನಾಥನ್ ದೆಹಲಿಯಲ್ಲಿ 2 ಬಿಲ್ಡರ್ ಫೊ್ಲೕರ್ಗಳ ಮಾಲೀಕತ್ವ ಹೊಂದಿದ್ದಾರೆ. ಈ ಎಲ್ಲವೂ ತಮಿಳುನಾಡಿನ ಕೊಯಮತ್ತೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ 2019ರಲ್ಲಿ ಅವರು ಅಪಾರ್ಟ್ ಮೆಂಟ್ ಒಂದನ್ನು ಖರೀದಿಸಿದ್ದಾರೆ. ಪಿತ್ರಾರ್ಜಿತವಾಗಿ ಎಸ್ಟೇಟ್ನಲ್ಲಿ ಅವರಿಗೆ ಶೇ. 50ರಷ್ಟು ಪಾಲು ಬಂದಿದೆ. ಅವರ ಹೂಡಿಕೆ 120 ಕೋಟಿ ರೂ.ನಷ್ಟಿದೆ. 2010-11ರಿಂದ 2024-25ರವರೆಗಿನ ಅವಧಿಯಲ್ಲಿ ಅವರು 91.47 ಕೋಟಿ ರೂ. ಆದಾಯ ತೆರಿಗೆ ಕಟ್ಟಿದ್ದಾರೆ.
1. ಜೆ.ಕೆ. ಮಾಹೇಶ್ವರಿ 2. ಬಿ.ವಿ. ನಾಗರತ್ನ 3. ದೀಪಂಕರ್ ದತ್ತಾ 4. ಅಹ್ಸನುದ್ದಿನ್ ಅಮಾನುಲ್ಲಾ 5. ಮನೋಜ್ ಮಿಶ್ರಾ 6. ಅರವಿಂದ್ ಕುಮಾರ್ 7. ಪ್ರಶಾಂತ್ ಕುಮಾರ್ ಮಿಶ್ರಾ 8. ಸತೀಶ್ಚಂದ್ರ ಶಮಾ 9. ಪ್ರಸನ್ನ ಬಾಲಚಂದ್ರ ವರಲೆ 10. ಎನ್. ಕೋಟೀಶ್ವರ್ ಸಿಂಗ್ 11. ಆರ್. ಮಹಾದೇವನ್ 12. ಜಯಮಾಲಾ ಬಾಗ್ಚಿ.
ಸಾರ್ವಜನಿಕ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ನ್ಯಾಯಮೂರ್ತಿಗಳ ವೈಯಕ್ತಿಕ ಆಸ್ತಿಪಾಸ್ತಿಗಳ ವಿವರ ಬಹಿರಂಗಪಡಿಸುವ ತೀರ್ಮಾನವನ್ನು ಸುಪ್ರೀಂ ಕೋರ್ಟ್ನ ಪೂರ್ಣ ಪೀಠ ಕೈಗೊಂಡಿತ್ತು.