ಬೆಂಗಳೂರು: ನಮ್ಮಲ್ಲಿ ಹಲವರಿಗೆ ತ್ವಚೆ ಹಾಗೂ ಮುಖದ ಕಾಂತಿ ಬಗ್ಗೆ ಸದಾ ಹೆಚ್ಚಿನ ಕಾಳಜಿ ಇರುತ್ತದೆ. ಮುಖದ ಸೌಂದರ್ಯ ಹಾಳಾಗದೆ ಇರಲು ಬಯಸುವ ಅನೇಕರು, ತಮ್ಮ ಮುಖದಲ್ಲಿ ಒಂದೇ ಒಂದು ಮೊಡವೆ ಕೂಡ ಮೂಡದಂತೆ ಸೂಕ್ಷ್ಮತೆ ವಹಿಸುತ್ತಾರೆ. ಮೊಡವೆಗಳು ಎದ್ದರೆ ಅದನ್ನು ಕೂಡಲೇ ಉಗುರಿನಿಂದ ಒಡೆಯುತ್ತಾರೆ. ಇದು ಕಪ್ಪು ಕಲೆಗಳಾಗಿ ಮುಖದ ಅಂದವನ್ನು ಹಾಳು ಮಾಡುತ್ತದೆ.
ಮುಖದ ಮೇಲೆ ಮೊಡವೆಯಾದಾಗ ಅದು ಗುಳ್ಳೆಯಂತೆ ಊದಿಕೊಳ್ಳುತ್ತದೆ. ಚರ್ಮದ ಪದರಗಳನ್ನು ಮೀರಿ ಕಿವಗಟ್ಟುವ ಮೊಡವೆಗಳು, ಅಧಿಕ ನೋವನ್ನು ಉಂಟುಮಾಡುತ್ತದೆ. ಕೆಲವರು ಈ ನೋವನ್ನು ತಾಳಲಾರದೆ ಅದನ್ನು ಹಣ್ಣಾಗುವ ಮುನ್ನವೇ ಹಿಸುಕಿ ಒಡೆಯುತ್ತಾರೆ. ಮೊಡವೆ ನಿಯಂತ್ರಿಸಲು ಮನೆಮದ್ದು ಸೇರಿದಂತೆ ಇತರೆ ಔಷಧಗಳನೆಲ್ಲಾ ಪ್ರಯೋಗಿಸಿ, ಅದಕ್ಕೊಂದು ಮುಕ್ತಿ ನೀಡುತ್ತಾರೆ.
ಮೊಡವೆ ಹೇಗಿರುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಆದ್ರೆ, ಇದು ಹೇಗೆ ಮೂಡುತ್ತದೆ ಎಂಬುದನ್ನು ಚಿತ್ರಣದ ಮುಖೇನ 'ಸೈನ್ಸ್' ಎಂಬ ಸೋಷಿಯಲ್ ಮೀಡಿಯಾ ಖಾತೆ ತನ್ನ ಅಧಿಕೃತ ಪುಟದಲ್ಲಿ ತೋರಿಸಿದೆ. 39 ಸೆಕೆಂಡ್ಗಳ ಕಿರು ವಿಡಿಯೋ ಇಲ್ಲಿದೆ ವೀಕ್ಷಿಸಿ.