ನ್ಯೂಸ್

ಭಾರತ, ಇರಾನ್​, ಬಾಂಗ್ಲಾ... ಯಾವ ದೇಶದಲ್ಲಿ ಮೊಟ್ಟೆ ಬೆಲೆ ಕಡಿಮೆ? ಇಲ್ಲಿದೆ ನೋಡಿ ಮಾಹಿತಿ | Egg Price

ಮೋಹನ್​ ಶೆಟ್ಟಿ

ಬೆಂಗಳೂರು: ಮೊಟ್ಟೆ (Egg Price) ಅಂದ್ರೆ ಸಾಕು ಮಾಂಸಪ್ರಿಯರು ಹಾಗೂ ಎಗಿಟೇರಿಯನ್ಸ್​ಗಳ ನಾಲಿಗೆ ರುಚಿ ನೋಡುವ ಆಸೆಯನ್ನು ನೇರವಾಗಿ ಮಿದುಳಿಗೆ ಅಲಾರಂ ರೀತಿ ಸೂಚಿಸುತ್ತದೆ. ಪ್ರತಿನಿತ್ಯ ಜಿಮ್​, ವಾಕಿಂಗ್, ವ್ಯಾಯಾಮ ಮಾಡುವ ಅದೆಷ್ಟೋ ಮಂದಿ ಸೇರಿದಂತೆ ಹಲವರು ತಮ್ಮ ಆಹಾರದಲ್ಲಿ ಮೊಟ್ಟೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪೋಷಕಾಂಶಗಳ ಆಗರ, ಆರೋಗ್ಯದ ಸಂಜೀವಿನಿ ಎಂದೇ ಕರೆಯಲ್ಪಡುವ ಮೊಟ್ಟೆಗೆ ಆಹಾರ ಪ್ರಿಯರ ಬೇಡಿಕೆ ಎಂದಿಗಿಂತ ಹೆಚ್ಚಿದೆ.

ಹೊಟ್ಟೆ-ಮೊಟ್ಟೆ

ಮೊಟ್ಟೆಗಳು ಪೌಷ್ಟಿಕಾಂಶಯುಕ್ತ ಆಹಾರವಾಗಿವೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ12, ವಿಟಮಿನ್ ಡಿ, ಕೋಲೀನ್ ಮತ್ತು ಕಬ್ಬಿಣದಂತಹ ಶಕ್ತಿಶಾಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ, ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ವೈದ್ಯರು ಸಹ ಮೊಟ್ಟೆ ಸೇವನೆ ಉತ್ತಮ ಎಂದು ಸಲಹೆ ನೀಡುತ್ತಾರೆ. ನೀವು ಪ್ರತಿದಿನ ಒಂದು ಮೊಟ್ಟೆ ತಿನ್ನಲು ಪ್ರಾರಂಭಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅಸಲಿಗೆ, ನಮ್ಮ ದೇಶ ಸೇರಿದಂತೆ ಇತರೆ ದೇಶಗಳಲ್ಲಿ ಒಂದು ಡಜನ್​ ಮೊಟ್ಟೆಯ ಬೆಲೆ ಎಷ್ಟಿದೆ? ಪ್ರಸ್ತುತ, ಎಷ್ಟಿರಬಹುದು? ಎಂಬ ಕುತೂಹಲ ಕೆಲವರಿಗಿರುತ್ತದೆ.

ಕೋಳಿ ಸಾಕಾಣಿಕೆ, ಬೇಡಿಕೆ

ಮೊಟ್ಟೆಯ ಉತ್ಪಾದನಾ ವೆಚ್ಚ, ಸರ್ಕಾರಿ ನೆರವು, ಸ್ಥಳೀಯ ಬೇಡಿಕೆ ಮತ್ತು ಕೃಷಿ ವಿಧಾನಗಳು 2025ರಲ್ಲಿ ಮೊಟ್ಟೆಯ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದು ಹೆಚ್ಚಿದ್ದರೆ, ಇನ್ನೂ ಕೆಲವು ಬಾರಿ ಇಳಿಕೆ ಆಗಿರುತ್ತದೆ. ದರದಲ್ಲಿ ಆಗಾಗ್ಗೆ ವ್ಯತ್ಯಾಸಗಳು ಕಂಡುಬರುತ್ತವೆ ಎಂಬುದು ಇಲ್ಲಿ ಗಮನಾರ್ಹ. ದೊಡ್ಡ ಪ್ರಮಾಣದಲ್ಲಿ ಮೊಟ್ಟೆಗಳನ್ನು ಉತ್ಪಾದಿಸುವುದರಿಂದ ಅಥವಾ ಕಡಿಮೆ ಕಾರ್ಮಿಕ ಮತ್ತು ಮೇವಿನ ವೆಚ್ಚವನ್ನು ಹೊಂದಿರುವುದರಿಂದ, ಕೆಲವು ರಾಷ್ಟ್ರಗಳು ಮಾತ್ರ ಮೊಟ್ಟೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತವೆ.

ವಿಶ್ವದ ಅತ್ಯಂತ ಕಡಿಮೆ ಮೊಟ್ಟೆಯ ದರಗಳು ಬಾಂಗ್ಲಾದೇಶ, ಪಾಕಿಸ್ತಾನ, ಇರಾನ್ ಮತ್ತು ಭಾರತದಂತಹ ದೇಶಗಳಲ್ಲಿ ಮಾತ್ರ ಲಭ್ಯ. ಇದಕ್ಕೆ ಹೆಚ್ಚಿನ ಬೇಡಿಕೆ, ಕಡಿಮೆ ಉತ್ಪಾದನಾ ವೆಚ್ಚ ಮತ್ತು ದೇಶೀಯ ಕೋಳಿ ಸಾಕಣೆಯೇ ಕಾರಣ. ಈ ರಾಷ್ಟ್ರಗಳಲ್ಲಿನ ದೊಡ್ಡ ಕೋಳಿ ಸಾಕಣೆ ಕೇಂದ್ರಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಮೊಟ್ಟೆಗಳನ್ನು ಉತ್ಪಾದಿಸುವುದರಿಂದ ಮಾರುಕಟ್ಟೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮೊಟ್ಟೆಗಳು ಸಿಗುತ್ತಿವೆ. ಇತರೆ ದೇಶಗಳಲ್ಲಿ ಅಲ್ಪ ಬೇಡಿಕೆ ಮತ್ತು ಕೋಳಿ ಸಾಕಾಣಿಕೆಗೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ಲಭ್ಯತೆ ಪ್ರಮಾಣವು ಕಡಿಮೆಯೇ ಇದೆ.

ಅಗ್ರ 10 ದೇಶಗಳಲ್ಲಿ 1 ಡಜನ್ ಮೊಟ್ಟೆ ದರ (12)

  • ಭಾರತ: 83 ರೂ.
  • ಇರಾನ್: 96 ರೂ.
  • ಪಾಕಿಸ್ತಾನ: 101 ರೂ.
  • ಬಾಂಗ್ಲಾದೇಶ: 101 ರೂ.
  • ಲಿಬಿಯಾ: 113 ರೂ.
  • ಬೆಲಾರಸ್: 115 ರೂ.
  • ಅಜೆರ್ಬೈಜಾನ್: 120 ರೂ.
  • ಉಜ್ಬೇಕಿಸ್ತಾನ್: 126 ರೂ.
  • ವಿಯೆಟ್ನಾಂ: 127 ರೂ.
  • ಈಜಿಪ್ಟ್: 128 ರೂ.