ಕರೊನಾ ವೈರಸ್ ಅಟ್ಟಹಾಸ ಹೆಚ್ಚುತ್ತಿರುವಂತೆ ಜಗತ್ತಿನೆಲ್ಲೆಡೆ ಹೆಚ್ಚುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ವೆಂಟಿಲೇಟರ್ಗಳಿಗಾಗಿ ಪರದಾಡುತ್ತಿವೆ. ಕೃತಕ ಉಸಿರಾಟ ವ್ಯವಸ್ಥೆಗೆ (ವೆಂಟಿಲೇಷನ್). ಅನುಕೂಲವಾಗುವ ಯಂತ್ರವೇ ವೆಂಟಿಲೇಟರ್. ಇದರ ಅಗತ್ಯ ಮತ್ತು ಕಾರ್ಯ ಏನೆಂಬ ವಿವರ ಇಲ್ಲಿದೆ.
ಬಹಳಷ್ಟು ಜನರಿಗೆ ಕೋವಿಡ್-19 ರೋಗ ಆವರಿಸಿ ಸೌಮ್ಯ ಸ್ವರೂಪದ ಲಕ್ಷಣ ಕಂಡು ಬಂದರೂ ಶೇಕಡಾ 6ರಷ್ಟು ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಅದರಲ್ಲೂ ಹೆಚ್ಚು ವಯಸ್ಸಾದವರಲ್ಲಿ ಅಪಾಯದ ಪ್ರಮಾಣ ಜಾಸ್ತಿಯಾಗಿರುತ್ತದೆ. ವೆಂಟಿಲೇಟರ್ಗಳ ಪೂರೈಕೆಯಲ್ಲಿ ಕೊರತೆಯಾದರೆ ಜೀವಕ್ಕೆ ಅಪಾಯ ಎನ್ನುವುದು ತಜ್ಞರ ಅಭಿಮತ. ‘ವೆಂಟಿಲೇಟರ್ ಇಲ್ಲದಿದ್ದರೆ ರೋಗಿ ಸಾಯುತ್ತಾರೆ. ಹಾಗಾಗಿ ಇದೊಂದು ಬಿಕ್ಕಟ್ಟಿನ ಸನ್ನಿವೇಶವಾಗಿದೆ’ ಎನ್ನುತ್ತಾರೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯದ ಸಮಗ್ರ ತೀವ್ರ ಆರೈಕೆ ಕೇಂದ್ರದ ಉಪ ನಿದೇರ್ಶಕ ಪೊ›ಫೆಸರ್ ಡೇವಿಡ್ ಸ್ಟೋರಿ. ಜಗತ್ತಿನಾದ್ಯಂತ ಕೃತಕ ಉಸಿರಾಟ ವ್ಯವಸ್ಥೆ ಅಗತ್ಯವಾಗುವ ರೋಗಿಗಳ ಸಂಖ್ಯೆ ತುಂಬಾ ಜಾಸ್ತಿಯಾಗಬಹುದು ಎನ್ನುವುದು ಆಸ್ಟ್ರೇಲಿಯಾದ ಶ್ವಾಸಕೋಶ ಫೌಂಡೇಷನ್ನ ಆಡಳಿತ ಮಂಡಳಿ ಸದಸ್ಯ ಪೊ›. ಶರತ್ ರಂಗನಾಥನ್ರ ಅಭಿಪ್ರಾಯ. ಕರೊನಾ ವೈರಸ್ ವಿಚಾರದಲ್ಲಿ ಇಟಲಿ ಮತ್ತು ಸ್ಪೇನ್ನ ಅನುಭವದ ಆಧಾರದಲ್ಲಿ ಈ ಲೆಕ್ಕಾಚಾರ ಹಾಕಲಾಗಿದೆ. ಸೋಂಕಿತ ವ್ಯಕ್ತಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿದ್ದರೆ ವೆಂಟಲೇಟರ್ ಅವಶ್ಯಕ. ಇದು ವ್ಯಕ್ತಿಯ ಬದುಕಿಸುವ ಪ್ರಮಾಣವನ್ನು ಹೆಚ್ಚಿಸುತ್ತದೆ.
ಕೋವಿಡ್-19 ಪೀಡಿತರಿಗೆ
ಕೋವಿಡ್-19 ಗಂಭೀರವಾಗಿರುವ ರೋಗಿಗಳಲ್ಲಿ ಜೀವಕ್ಕೇ ಅಪಾಯವಾಗುವ ‘ತೀವ್ರ ಉಸಿರಾಟದ ಸಂಕಟದ ಲಕ್ಷಣ’ (ಎಆರ್ಡಿಎಸ್-ಆರ್ಡ್ಸ್) ಕಂಡು ಬರಬಹುದು. ಅದಕ್ಕೆ ಸಣ್ಣ ಪ್ರಮಾಣದಲ್ಲಿ ಆದರೆ, ಹೆಚ್ಚಿನ ವೇಗದಲ್ಲಿ ಆಮ್ಲಜನಕ ಮತ್ತು ಗಾಳಿ ಒದಗಿಸುವ ವೆಂಟಿಲೇಷನ್ ಬೇಕಾಗುತ್ತದೆ. ರೋಗಿ ಹಲವು ವಾರಗಳ ಕಾಲ ವೆಂಟಿಲೇಷನ್ನಲ್ಲಿರಬೇಕಾಗುತ್ತದೆ.
ಕೋವಿಡ್-19 ರೋಗಿಗಳ ವಿಚಾರದಲ್ಲಿ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ವೈರಸ್ನಿಂದ ತಾವೇ ಸೋಂಕಿತರಾಗದಿರಲು ಇದು ಅಗತ್ಯ.
ವೆಂಟಿಲೇಟರ್ಗಳ ಕೊರತೆ ರೋಗಿಗಳ ಪ್ರಾಣಕ್ಕೆ ಎರವಾಗುವ ಸಾಧ್ಯತೆ ಇದೆ. ಹೀಗಾಗಿ ಕೋವಿಡ್-19 ರೋಗಿಗಳು ಹೆಚ್ಚಾಗದಂತೆ ಸಾಧ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಇದಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮನೆಯಲ್ಲೇ ಇರುವುದು, ಸೋಂಕಿತ ವ್ಯಕ್ತಿ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಕಡ್ಡಾಯವಾಗಿ ಪಾಲಿಸುವುದು, ಸೋಂಕಿತರನ್ನು ಐಸೋಲೇಷನ್ನಲ್ಲಿ ಇರಿಸುವ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.
ರೋಗಿಯ ಉಸಿರಾಟದ ಸಮಸ್ಯೆಯನ್ನು ಅವಲೋಕಿಸಿ ವೆಂಟಿಲೇಟರ್ ಅಳವಡಿಸುವ ನಿರ್ಧಾರ ಕೈಗೊಳ್ಳಲಾಗು ತ್ತದೆ. ಉಸಿರಾಟದ ಪ್ರಮಾಣದಲ್ಲಿ ಏರಿಕೆ, ಹತಾಶರಂತೆ ಕಾಣುವುದು, ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹೆಚ್ಚುವುದು, ನಿದ್ರೆ ಹೆಚ್ಚುವುದು ಹಾಗೂ ಗೊಂದಲ ಕಾಡುವುದು ಉಸಿರಾಟ ಸಮಸ್ಯೆಯ ಲಕ್ಷಣವಾಗಿದೆ.
ಸಾಮಾನ್ಯ ಉಸಿರಾಟ ಪ್ರಮಾಣ ನಿಮಿಷಕ್ಕೆ 15 ಆಗಿರುತ್ತದೆ. ನಿಮಿಷಕ್ಕೆ ಸುಮಾರು 28 ಆದರೆ ಅದು ವೆಂಟಿಲೇಷನ್ ಅಗತ್ಯವಾಗುವ ಸಮಸ್ಯೆಯ ಸೂಚನೆ.
ರೋಗಿಯ ಆಮ್ಲಜನಕ ಪ್ರಮಾಣ ಹೆಚ್ಚಿಸಲು ಇತರ ಕೆಲವು ಕ್ರಮಗಳೂ ಇವೆ. ‘ನಾನ್ ಇನ್ವೇಸಿವ್’ ಎನ್ನಲಾಗುವ ಈ ವಿಧಾನದಲ್ಲಿ ವೆಂಟಿಲೇಷನ್ನಲ್ಲಿ ಮಾಸ್ಕ್ ಮತ್ತು ಆಮ್ಲಜನಕ ಟ್ಯಾಂಕ್ ಒಳಗೊಂಡಿರುತ್ತದೆ. ಆದರೆ, ಈಗ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ರೋಗಿಗಳಲ್ಲಿ ಕೆಮ್ಮುವಿಕೆ ಇದ್ದರೆ ವೈದ್ಯಕೀಯ ಸಿಬ್ಬಂದಿಗೆ ವೈರಾಣು ಸೋಂಕಬಹುದೆಂಬ ಆತಂಕವಿದ್ದು ಈ ನಾನ್ ಇನ್ವೇಸಿವ್ ವಿಧಾನ ನಿವಾರಿಸಲು ಪ್ರಯತ್ನಿಸಲಾಗುತ್ತದೆ. ್ಝಮಸ್ಯೆ ತೀವ್ರವಾಗಿದ್ದರೆ 30 ನಿಮಿಷ ದೊಳಗೆ ವೆಂಟಿಲೇಟರ್ ವ್ಯವಸ್ಥೆ ಮಾಡುವುದು ಅತ್ಯಗತ್ಯ.
ವೆಂಟಿಲೇಟರ್ ಕಾರ್ಯವಿಧಾನ
ನ್ಯುಮೋನಿಯಾ ಸೇರಿದಂತೆ ತೀವ್ರ ಉಸಿರಾಟದ ತೊಂದರೆ ಇರುವ
ರೋಗಿಗೆ ಉಸಿರಾಟಕ್ಕೆ ಅನುಕೂಲ ಕಲ್ಪಿಸುವ ಯಂತ್ರ ವೆಂಟಿಲೇಟರ್.
ರೋಗಿಗೆ ವೆಂಟಿಲೇಟರ್ ಅಳವಡಿಸುವ ಮುನ್ನ ಅರವಳಿಕೆ ತಜ್ಞರು ಇಂಟ್ಯುಬೇಷನ್ ಎಂಬ ಪ್ರಕ್ರಿಯೆ ನಡೆಸುತ್ತಾರೆ.
ರೋಗಿಯ ಬಾಯಿ ಮೂಲಕ ಶ್ವಾಸನಾಳಕ್ಕೆ ನಳಿಕೆ ತೂರಿಸಲಾಗುತ್ತದೆ. ಇದು ಸಾಧಾರಣ ಪ್ರಕ್ರಿಯೆ. ನಂತರ ಉಸಿರಾಟ ನಳಿಕೆಯನ್ನು ವೆಂಟಿಲೇಟರ್ಗೆ ಸಂರ್ಪಸಲಾಗುತ್ತದೆ. ಗಾಳಿ ಮತ್ತು ಆಮ್ಲಜನಕ ವನ್ನು ಶ್ವಾಸಕೋಶಕ್ಕೆ ತಳ್ಳುವ ಪ್ರಮಾಣವನ್ನು ವೈದ್ಯಕೀಯ ಸಿಬ್ಬಂದಿ ನಿಯಂತ್ರಿಸುತ್ತಾರೆ. ಆಮ್ಲಜನಕದ ಮಿಶ್ರಣವನ್ನು ಹೊಂದಿಸುತ್ತಾರೆ.