ರಾಜಸ್ಥಾನ: ಇದೇ ಡಿ.09ರಂದು ಆಯೋಜಿಸಿದ್ದ ರಾಜಸ್ಥಾನ್ ರೈಸಿಂಗ್ ಇವೆಂಟ್ ಕಾರ್ಯಕ್ರಮದಲ್ಲಿ ಪಾಲ್ಗೊಗೊಂಡಿದ್ದ ಸೋನ್ ನಿಗಮ್ ಗಾಯನ ಮಾಡುತ್ತಿದ್ದಾಗ ಅಲ್ಲಿನ ಸ್ಥಳೀಯ ರಾಜಕಾರಣಿಗಳು(CM) ಕಾರ್ಯಕ್ರಮದ ಮಧ್ಯೆ ಎದ್ದು ಹೋಗಿದ್ದಕ್ಕೆ ಗರಂ ಆಗಿದ್ದಾರೆ.
ಈ ಕುರಿತು ಗಾಯಕ ಸೋನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹಂಚಿಕೊಂಡಿದ್ದಾರೆ. ರಾಜಕಾರಣಿಗಳು ಇಡೀ ಕಾರ್ಯಕ್ರಮಕ್ಕೆ ಉಳಿಯಲು ಸಾಧ್ಯವಾಗದಿದ್ದರೆ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿಗಳಿಗೆ ಏಟು; ಲಿಂಗಾಯತರ ಟಾರ್ಗೆಟ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದ Basavajaya Mruthyunjaya Swamiji
“ರಾಜಸ್ಥಾನದ ಹೆಮ್ಮೆಯನ್ನು ಹೆಚ್ಚಿಸಲು ಪ್ರಪಂಚದಾದ್ಯಂತ ಪ್ರತಿನಿಧಿಗಳು ಬಂದಿದ್ದರು. ಸಿಎಂ ಸೇರಿದಂತೆ ಯುವ ಸಚಿವರು, ಕ್ರೀಡಾ ಸಚಿವರೂ ಇದ್ದರು. ಬಹಳ ಜನ ಸೇರಿದ್ದರು. ಕತ್ತಲಲ್ಲಿ ಅವರನ್ನೆಲ್ಲ ನೋಡಲಾಗಲಿಲ್ಲ. ಬಹಳಷ್ಟು ಜನರಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ, CM ಮತ್ತು ಉಳಿದವರು ಹೊರಟುಹೋದುದನ್ನು ನಾನು ನೋಡಿದೆ. ಅವರು ಹೋದ ತಕ್ಷಣ, ಎಲ್ಲಾ ಪ್ರತಿನಿಧಿಗಳು ಸಹ ಹೊರಟರು. ನಾನು ಎಲ್ಲಾ ರಾಜಕಾರಣಿಗಳಲ್ಲಿ ವಿನಂತಿಸುತ್ತೇನೆ, ನೀವು ನಿಮ್ಮ ಕಲಾವಿದರನ್ನು ಗೌರವಿಸದಿದ್ದರೆ. ನಿಮ್ಮ ಈ ವರ್ತನೆ ಇಷ್ಟವಾಗಲಿಲ್ಲ'' ಎಂದು ಹೇಳಿದ್ದಾರೆ.
''ನಿಮಗೆ ಬೇರೆ ಕಾರ್ಯಕ್ರಮಗಳ ಪಟ್ಟಿ ಇದ್ದರೆ. ನಮ್ಮ ಕಾರ್ಯಕ್ರಮಕ್ಕೆ ಬರಬೇಡಿ ಎಂದಿರುವ ಅವರು, ಒಬ್ಬ ಕಲಾವಿದನ ಅಭಿನಯ ಮತ್ತು ಗಾಯನವನ್ನು ಮಧ್ಯದಲ್ಲಿ ಬಿಟ್ಟು ಹೋಗುವುದು ಸರಿಯಲ್ಲ, ಅದು ಸರಸ್ವತಿಗೆ ಅಪಮಾನ ಮಾಡಿದಂತೆ ಎಂದು ಹಂಚಿಕೊಂಡಿರುವ ವಿಡಿಯೋದಲ್ಲಿ ಗರಂ ಆಗಿದ್ದಾರೆ''.(ಏಜೆನ್ಸಿಸ್)