ಸಾಲಿಗ್ರಾಮ: ತಾಲೂಕಿನ ಮುಂಜನಹಳ್ಳಿ ಗ್ರಾಮದಲಿ ್ಲಧಾರಾಕಾರ ಮಳೆಗೆ ವಾಸದ ಮನೆ ಛಾವಣಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ರಾಜೇಗೌಡ ಎಂಬುವವರ ಪುತ್ರ ಲೋಕೇಶ್ ಅವರ ಮನೆ ಛಾವಣಿ ಬಿದ್ದು, ಗೃಹಬಳಕೆ ವಸ್ತುಗಳು ನಷ್ಟವಾಗಿವೆ. ಇದು ಹಳೇ ಮನೆಯಾಗಿದ್ದು, ಶೀತದಿಂದ ಕೂಡಿತ್ತು. ಆಶ್ರಯ ಮನೆಗಾಗಿ ಕುಟುಂಬಸ್ಥರು ಅಲೆದಾಡುತ್ತಿದ್ದರು. ಆದರೆ ಗ್ರಾಮದಲ್ಲಿ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಛಾವಣಿ ಹಾಗೂ ಗೋಡೆ ಕುಸಿದು ಸಂಪೂರ್ಣ ಹಾನಿಯಾಗಿದೆ.
ಗ್ರಾಮಲೆಕ್ಕಿಗ ರವೀಂದ್ರ, ಪಿಡಿಒ ಪ್ರತಾಪ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮನೆ ಹಾನಿ ವರದಿ ಸಲ್ಲಿಸಿ ಸರ್ಕಾರದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.