ಯಡೇಹಳ್ಳಿ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಅಲಗಾಚಾರ್ ಎಂಬುವರ ಮನೆ ಗೋಡೆ ಕುಸಿದಿರುವುದು. 
ನ್ಯೂಸ್

ಯಡೇಹಳ್ಳಿ ಗ್ರಾಮದಲ್ಲಿ ಮನೆ ಕುಸಿತ

ಹೊಳೆಹೊನ್ನೂರು: ಕಳೆದ ಎರಡ್ಮೂರು ದಿನದಿಂದ ಪಟ್ಟಣ ಸುತ್ತಮುತ್ತ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಯಡೇಹಳ್ಳಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದಿದೆ. ಗ್ರಾಮದ ನಿವೃತ್ತ ಶಿಕ್ಷಕ ಅಲಗಾಚಾರ್ ಎಂಬುವವರ ಮನೆಯ ಎಡಭಾಗದ ಗೋಡೆ ನೆಲಕಚ್ಚಿದೆ. ಗೋಡೆ ಮನೆಯ ಹೊರಭಾಗಕ್ಕೆ ಬಿದ್ದಿದೆ. ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು ಹಾಳಾಗಿವೆ. ಇದೀಗ ಕುಟುಂಬ ನಿರಾಶ್ರಿತವಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.