ಡೆಹ್ರಾಡೂನ್ : ಉತ್ತರಾಖಂಡದ ನೈನಿತಾಲ್ ಮತ್ತು ಡೆಹ್ರಾಡೂನ್ ನಗರಗಳಲ್ಲಿರುವ ಹೊಟೆಲ್ಗಳಿಗೆ ತಮ್ಮ ಸಾಮರ್ಥ್ಯದಲ್ಲಿ ಅರ್ಧದಷ್ಟು ರೂಮುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶ ಹೊರಡಿಸಿದ್ದಾರೆ. ಲಾಕ್ಡೌನ್ ಸಡಿಲಿಕೆಯಿಂದಾಗಿ ಇಲ್ಲಿನ ಮಸ್ಸೂರಿಯಂತಹ ಜನಪ್ರಿಯ ಹಿಲ್ ಸ್ಟೇಷನ್ಗಳಲ್ಲಿ ಉಂಟಾಗುತ್ತಿರುವ ಜನಜಂಗುಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
"ನೈನಿತಾಲ್ ಮತ್ತು ಡೆಹ್ರಾಡೂನ್ನಲ್ಲಿನ ಹೊಟೆಲ್ಗಳಿಗೆ ಶೇ.50 ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಿದ್ದೇವೆ. ಮಾಸ್ಕ್ ಧರಿಸದವರಿಗೆ ಚಲನ್ ನೀಡಲಾಗುತ್ತಿದೆ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ" ಎಂದು ಧಾಮಿ ಹೇಳಿದ್ದಾರೆ.
ಪಕ್ಕದ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕುರ್ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. "ನಾವು ಪ್ರವಾಸೋದ್ಯಮವನ್ನು ಉಳಿಸಬೇಕಾಗಿದೆ. ನಾನು ಎಲ್ಲಾ ಜಿಲ್ಲಾ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಜನಜಂಗುಳಿಯನ್ನು ನಿಯಂತ್ರಿಸಲು ನಿರ್ದೇಶನ ನೀಡಿದ್ದೇನೆ. ಕೋವಿಡ್-19 ಇನ್ನೂ ಮುಗಿದಿಲ್ಲ. ಹೋಟೆಲ್ಗಳಿಗೆ ಎಸ್ಒಪಿ ಪಾಲಿಸಲು ಹೇಳಲಾಗಿದೆ" ಎಂದು ಠಾಕುರ್ ಹೇಳಿದ್ದಾರೆ. (ಏಜೆನ್ಸೀಸ್)