ನ್ಯೂಸ್

SHOCKING VIDEO | ಬೀದಿ ಬದಿಯಲ್ಲಿ ಬಿರಿಯಾನಿ ತಿನ್ನುವ ಮುನ್ನ ನೀರು ಎಲ್ಲಿಂದ ಬರುತ್ತಿದೆ ಎಂದು ಗಮನಿಸಿ; ಇಲ್ಲಾಂದ್ರೆ...

ಹರಿಯಾಣ: ಅಡುಗೆ ಮನೆ ಎಂದರೆ ಸ್ವಚ್ಛವಾಗಿರಬೇಕು, ಎಲ್ಲಾ ಸಾಮಗ್ರಿಗಳನ್ನೂ ಸರಿಯಾಗಿ ಜೋಡಿಸಿರಬೇಕು ಎನ್ನುವ ಕಲ್ಪನೆ ಇರುತ್ತದೆ. ಇಂದಿನ ಕೆಲ ಹೋಟೆಲುಗಳಲ್ಲಿ ಇದನ್ನು ಕಾಣುವುದು ಕಷ್ಟವಾದರೂ ಅಡುಗೆ ಮಾಡುವ ಜಾಗ ಸ್ವಚ್ಛವಾಗಿದ್ದರೆ ಸಾಕು ಎಂದು ಜನ ಅಂದುಕೊಳ್ಳುತ್ತಾರೆ. ಆದರೆ, ಅಡುಗೆಗೆ ಬಳಸುವ ನೀರೇ ಗಲೀಜಾಗಿದ್ದರೆ?! ಹೌದು. ಈ ಬಿರಿಯಾನಿ ಅಂಗಡಿಯಲ್ಲಿ ಬಳಸಲಾಗುತ್ತಿರುವುದು ಚರಂಡಿ ನೀರನ್ನು.

ಈ ಬೆಳವಣಿಗೆ ಅಲ್ಲಿ ಆಹಾರ ಸೇವಿಸಿದವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಷ್ಟೇ ಅಲ್ಲ, ಆಹಾರ ಪ್ರಿಯರ ಮನಸ್ಸಿಗೂ ಘಾಸಿ ಉಂಟು ಮಾಡುತ್ತದೆ. ಯಾರೋ ಒಬ್ಬರು ಮಾಡುವ ತಪ್ಪಿನಿಂದಾಗಿ ಇಡೀ ಉದ್ಯಮಕ್ಕೆ ಕಪ್ಪು ಚುಕ್ಕೆ ಬರುತ್ತದೆ. ಬಿರಿಯಾನಿಗೆ ಚರಂಡಿ ನೀರನ್ನು ಬಳಸುವಂತಹ ದುರಂತ ಘಟನೆ ನಡೆದದ್ದು ಹರಿಯಾಣದಲ್ಲಿ.

ಹರಿಯಾಣದ ಪಿಂಜೋರ್‍ ಎನ್ನುವಲ್ಲಿ ರೈಲ್ವೇ ಅಂಡರ್‍ ಪಾಸ್ ಇದ್ದು ಅಲ್ಲೇ ಇರುವ ಶಮಾ ಬಿರಿಯಾನಿ ಎನ್ನುವ ಹೋಟೆಲ್‍ನಲ್ಲಿ ಈ ಆತಂಕಕಾರಿ ಘಟನೆ ನಡೆದಿದೆ. ಕೆಲ ಸ್ಥಳೀಯರು, ಈ ಮಾಹಿತಿಯನ್ನು ಬಹಿರಂಗಪಡಿಸಿ ವಿಡಿಯೋ ಮಾಡಿದ್ದು ಇದನ್ನು ಮೆಗ್ ಅಪ್‍ಡೇಟ್ಸ್ ಎನ್ನುವ ಟ್ವಿಟರ್‍ ಹ್ಯಾಂಡಲ್‍ನಿಂದ ಪೋಸ್ಟ್ ಮಾಡಲಾಗಿದೆ.

ಈ ಕುರಿತಾಗಿ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು ಒಬ್ಬರು, ಕಡಿಮೆ ಬೆಲೆಯ ಆಹಾರ ಮಾರಾಟಗಾರರ ಬಳಿ ಖರೀದಿಸಿ ತಿಂದು ತಮಗೆ ಯಾವ ರೀತಿ ಆರೋಗ್ಯ ಹದಗೆಟ್ಟಿತ್ತು ಎನ್ನುವುದನ್ನು ಹಂಚಿಕೊಂಡಿದ್ದಾರೆ. ಇನ್ನೊಬ್ಬರು, ತಾವು ಹೆಚ್ಚು ಬೆಲೆ ತೆತ್ತಾದರೂ ಸರಿ, ಸರ್ಕಾರ ಸರಿಯಾಗಿ ಇನ್ಸ್ಪೆಕ್ಷನ್‍ ನಡೆಸುವ ಸ್ಥಳಗಳಲ್ಲಿ ಮಾತ್ರ ಆಹಾರ ಸೇವಿಸುತ್ತಿರುವುದಾಗಿ ಹೇಳಿದ್ದಾರೆ. ಮತ್ತೊಬ್ಬರು, ತಾವು ಮನೆಯಲ್ಲಿ ತಯಾರಿಸಿದ ಆಹಾರ ಮಾತ್ರ ಸೇವಿಸುವುದಾಗಿ ತಿಳಿಸಿದ್ದಾರೆ. ಜನ ಹೇಗೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ ಇಲ್ಲಿ ನೋಡಿ...