ನ್ಯೂಸ್

ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವ್ಯಕ್ತಿಯನ್ನು ರಕ್ಷಿಸಿದ ಹೋಟೆಲ್ ಸಿಬ್ಬಂದಿಗಳು, ವಿಡಿಯೋ ವೈರಲ್‌ | Flood

Flood: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಹೋಟೆಲ್‌ನ ಸಿಬ್ಬಂದಿಗಳು ಧೈರ್ಯದಿಂದ ರಕ್ಷಿಸಿ, ಮಾನವೀಯತೆ ಮೆರೆದ ಘಟನೆ ಅಜ್ಮೀರ್‌ನಲ್ಲಿ (ಜು.18) ನಡೆದಿದೆ.

ಘಟನೆಯ ವಿಡಿಯೋದಲ್ಲಿ ಆ ಪ್ರದೇಶದಲ್ಲಿ ಪ್ರವಾಹದ ಆತಂಕಕಾರಿ ದೃಶ್ಯಗಳನ್ನು ನೋಡಬಹುದು. ನೀರಿನ ಬಾಟಲಿಯನ್ನು ಹಿಡಿದಿದ್ದ ವ್ಯಕ್ತಿಯೊಬ್ಬ ಪ್ರವಾಹದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಅಲ್ಲೇ ಇದ್ದ ಹಲವಾರು ಜನರು ತಕ್ಷಣ ಸಹಾಯ ಮಾಡಲು ಪ್ರಯತ್ನಿಸಿದರು, ಆದರೆ ನೀರಿನ ರಭಸ ತುಂಬಾ ಬಲವಾಗಿತ್ತು.

ನಂತರ ಆತ ಕೊಚ್ಚಿ ಹೋಗುತ್ತಿರುವಾಗ ಹತ್ತಿರದ ಹೋಟೆಲ್‌ ಸಿಬ್ಬಂದಿಯೊಗಳು ಯಾವುದೇ ಹಿಂಜರಿಕೆಯಿಲ್ಲದೆ ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೀರಿನ ರಭಸದ ನಡುವೆಯೂ, ಅವರು ಆ ವ್ಯಕ್ತಿಯನ್ನು ಹಿಡಿದು ಪಕ್ಕಕ್ಕೆ ಎಳೆದಿದ್ದಾರೆ.

ಕಳೆದ 24 ಗಂಟೆಗಳಲ್ಲಿ, ರಾಜಸ್ಥಾನದ ಹಲವು ಭಾಗಗಳಲ್ಲಿ ಮಧ್ಯಮ ಮಳೆಯಾಗಿದ್ದರೆ, ಪ್ರತ್ಯೇಕ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಕೋಟಾ ಜಿಲ್ಲೆಯ ಸಂಗೋಡ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, 166 ಮಿ.ಮೀ. ಮಳೆಯಾಗಿದೆ. ಜೈಸಲ್ಮೇರ್‌ನಲ್ಲಿ ಅತಿ ಹೆಚ್ಚು ಗರಿಷ್ಠ ತಾಪಮಾನ 39.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕನಿಷ್ಠ ತಾಪಮಾನ ಸಿರೋಹಿ ಎಡಬ್ಲ್ಯೂಎಸ್‌ನಲ್ಲಿ 20.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. (ಏಜೆನ್ಸೀಸ್​)