Acid: ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೊಬ್ಬ ನೀರು ಎಂದುಕೊಂಡು ಬಾತ್ರೂಮ್ ತೊಳೆಯುವ ಆ್ಯಸಿಡ್ ಕುಡಿದ ಘಟನೆ ಧಾರವಾಡದ ಸರ್ಕಾರಿ ಹಾಸ್ಟೆಲ್ವೊಂದರಲ್ಲಿ ನಡೆದಿದೆ. ಈ ಘಟನೆ ಜೂ.30ರಂದು ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮಕ್ಕೆ ಸೇರಿದ ವಿದ್ಯಾರ್ಥಿ ಕುಬೇರ್ ಲಮಾಣಿ ಸಂತ್ರಸ್ತ. ಧಾರವಾಡದ ಅಂಜುಮಾನ್ ಕಾಲೇಜಿನಲ್ಲಿ BA ಕೋರ್ಸ್ ಮಾಡುತ್ತಿದ್ದಾರೆ. ಇಲ್ಲಿನ ಗಾಂಧಿನಗರದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿಯಾಗಿದ್ದಾನೆ.
ಇನ್ನು ಈ ಘಟನೆ ನಡೆದ ಬಳಿಕ ವಿದ್ಯಾರ್ಥಿ ಕುಬೇರ್ ಲಮಾಣಿಗೆ ಗಂಟಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.