ನ್ಯೂಸ್

ಹಾಸ್ಟೇಲ್​ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ; ರಾಜು ಜಾಡಮಲ್ಲಿ ಆಗ್ರಹ

Haveri - Kariyappa Aralikatti

ರಾಣೆಬೆನ್ನೂರ: ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಇಲ್ಲಿಯ ಗಂಗಾಮಸ್ಥರ ಸಮಾಜದ ಜಾಗದಲ್ಲಿ ಹಾಸ್ಟೇಲ್​ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಗಂಗಾಮತಸ್ಥರ ಸಮಾಜದ ತಾಲೂಕು ಅಧ್ಯಕ್ಷ ರಾಜು ಜಾಡಮಲ್ಲಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಣೆಬೆನ್ನೂರಿನ ಕಂಠಿಬೀರೇಶ್ವರ ನಗರದಲ್ಲಿ ಗಂಗಾಮಸ್ಥರ ಸಮಾಜಕ್ಕೆ ನೀಡಿದ 9.25 ಗುಂಟೆ ಜಾಗವಿದೆ. ಅಲ್ಲಿ ವಿದ್ಯಾಥಿರ್ಗಳಿಗೆ ಹಾಸ್ಟೇಲ್​ ನಿಮಿರ್ಸುವ ಉದ್ದೇಶದಿಂದ ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ 3.40 ಕೋಟಿ ರೂ. ಯೋಜನೆ ರೂಪಿಸಿ ಪ್ರಸ್ತಾವಣೆ ಸಲ್ಲಿಸಲಾಗಿತ್ತು.

ಸರ್ಕಾರದಿಂದ 1 ಕೋಟಿ ರೂ. ಬಿಡುಗಡೆಯಾಗಿ ಕಾಮಗಾರಿ ಆರಂಭಕ್ಕೆ ಸೂಚನೆ ಕೂಡ ದೊರೆತಿತ್ತು. ಆದರೆ, ಅಷ್ಟರಲ್ಲಿ ವಿಧಾನಸಭೆ ಚುನಾವಣೆ ಬಂದ ಕಾರಣ ಕಾಮಗಾರಿ ಆರಂಭಗೊಂಡಿರಲಿಲ್ಲ. ನಂತರದಲ್ಲಿ ಆಡಳಿತಕ್ಕೆ ಕಾಂಗ್ರೆಸ್​ ಸರ್ಕಾರ ಅನುದಾನ ವಾಪಸ್​ ಪಡೆದುಕೊಂಡಿತ್ತು. ಇದರಿಂದ ಹಾಸ್ಟೇಲ್​ ಕಾಮಗಾರಿ ಆರಂಭವಾಗಲೇ ಇಲ್ಲ.

ಆದ್ದರಿಂದ ಈ ಬಗ್ಗೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಾಜದ ಎಲ್ಲ ಮುಖಂಡರು ತೆರಳುತ್ತಿದ್ದೇವೆ. ಸರ್ಕಾರ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಿದ್ಯಾಥಿರ್ಗಳಿಗಾಗಿ ಹಾಸ್ಟೇಲ್​ ನಿಮಿರ್ಸಿಕೊಡಬೇಕು ಎಂದು ಒತ್ತಾಯಿಸಿದರು.

ಚೌಡಯ್ಯದಾನಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪದ ಅಭಿವೃದ್ಧಿಗಾಗಿ 32 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ, ಇದರಲ್ಲಿ ಗದ್ದುಗೆ ಅಭಿವೃದ್ಧಿ ಬದಲು ಕಟ್ಟಡ ನಿರ್ಮಾಣ ಮಾಡಿದ್ದಾರೆ. ಇದು ಕೂಡ ಯಾವುದಕ್ಕೂ ಪ್ರಯೋಜನವಿಲ್ಲವಾಗಿಲ್ಲ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಚಿವರನ್ನು ಭೇಟಿ ಮಾಡಿ ಅನುದಾನ ವಾಪಸ್​ ತರಲು ಸಮಾಜದವರು ಸಭೆ ಮಾಡಿ ಮುಂದಿನ ಹೋರಾಟದ ಮಾರ್ಗಸೂಚಿ ಕುರಿತು ಚಚಿರ್ಸಿದ್ದೇವೆ. ಸರ್ಕಾರ ಕೂಡಲೇ ಹಾಸ್ಟೇಲ್​ ನಿರ್ಮಾಣ ಹಾಗೂ ಐಕ್ಯ ಮಂಟಪ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಾಜದ ಪ್ರಮುಖರಾದ ರಾಜು ರಟ್ಟಿಹಳ್ಳಿ, ಮೂತಿರ್ ಸುಣಗಾರ, ಕೊಟ್ರೇಶ ಕುದರಿಹಾಳ, ವಕೀಲ ಹೊನ್ನಪ್ಪ ತಿಮ್ಮೇನಹಳ್ಳಿ, ಹಾಲೇಶ ಜಾಡರ, ಹಾಲೇಶ ಬಣಗಾರ, ಹೊನ್ನಪ್ಪ ಹರವಿ, ಕಾಳಪ್ಪ ಅಂಬಿಗೇರ, ರಾಜೇಂದ್ರ ಅಂಬಿಗೇರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.