HAMPI 
ನ್ಯೂಸ್

ವಿದ್ಯಾರ್ಥಿಗಳಾಗಲಿದ್ದಾರೆ ಹಂಪಿ ಮ್ಯಾನೇಜರ್ಸ್

ಮಂಜುನಾಥ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ವಿಶ್ವವಿಖ್ಯಾತ ಹಂಪಿ ಸ್ಮಾರಕಗಳನ್ನು ನೋಡಲು ದೇಶ, ವಿದೇಶಗಳಿಂದ, ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ, ಸ್ಥಳೀಯರಿಗೆ ಐತಿಹಾಸಿಕ ಹಂಪಿಯ ಸಂಪೂರ್ಣ ಮಾಹಿತಿ ತಿಳಿದಿರುವುದಿಲ್ಲ. ಆದ್ದರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ಒಂದು ದಿನದ ಮಟ್ಟಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಹಂಪಿಗೆ ಮ್ಯಾನೇಜರ್ಸ್ ಮಾಡಲು ನಿರ್ಧರಿಸಿದೆ.

ಹಂಪಿಯ ಐತಿಹಾಸಿಕ ಸ್ಮಾರಕಗಳ ಮಹತ್ವ, ವಿಶೇಷತೆ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡುವುದು ಮತ್ತು ಸ್ಮಾರಕಗಳ ರಕ್ಷಣೆಯ ಜವಾಬ್ದಾರಿಯ ಕುರಿತು ಅರಿವು ಮೂಡಿಸಲು ವರ್ಲ್ಡ್ ಹೆರಿಟೇಜ್ ವೀಕ್ ನಿಮಿತ್ತ ನ.25ರಂದು ಒಂದು ದಿನ ಇಡೀ ಹಂಪಿಯಲ್ಲಿ ಇಲಾಖೆಯ ನೌಕರರು ಕೆಲಸ ಮಾಡುವ ಸ್ಥಳಗಳಲ್ಲಿ ಅವರೊಟ್ಟಿಗಿದ್ದು, ಅವರು ಮಾಡುವ ಕೆಲಸಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ನೀಡಲು ತಯಾರಿ ನಡೆಸಿದೆ. ಹಂಪಿ ವೃತ್ತದ ವ್ಯಾಪ್ತಿಯ 7 ಉಪವೃತ್ತಗಳಾದ ಹಂಪಿ, ಕಮಲಾಪುರ, ಬಳ್ಳಾರಿ, ಹರಪನಹಳ್ಳಿ, ಕಲಬುರಗಿ, ಕೊಪ್ಪಳ, ಬೀದರ್‌ನಲ್ಲಿ ಸಂರಕ್ಷಿತ ಸ್ಮಾರಕಗಳ ಪ್ರದೇಶಗಳಲ್ಲಿ ಒಂದು ವಾರದ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲಿಗೆ ಹಂಪಿಯಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಹೆರಿಟೇಜ್ ವಾಕ್ ಹಾಗೂ 24ರಂದು ಬೀದರ್‌ನಲ್ಲಿ ಹೆರಿಟೇಜ್ ವಾಕ್ ಮತ್ತು 25ರಂದು ಹಂಪಿಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ. ಹಂಪಿ ಉಳಿಸಿ, ಮುಂದಿನ ಪೀಳಿಗೆಗೆ ನೀಡುವುದು ಸೇರಿದಂತೆ ಇದರ ಇರಿಹಾಸವನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಇಂಥದ್ದೊAದು ನಿರ್ಧಾರ ಮಾಡಿರುವ ಎಎಸ್‌ಐ, ಹಂಪಿ ಕನ್ನಡ ವಿವಿ ಸೇರಿ ಕೆಲ ಕಾಲೇಜುಗಳೊಂದಿಗೆ ವಿದ್ಯಾರ್ಥಿಗಳನ್ನು ಕಳಿಸುವ ಕುರಿತು ಮಾತುಕತೆ ನಡೆಸಿದೆ.

ಮ್ಯಾನೇಜರ್ಸ್ ಡ್ಯೂಟಿ

ಒಂದು ದಿನದ ಮಟ್ಟಿಗೆ ಹಂಪಿ ಹೆರಿಟೇಜ್ ಮ್ಯಾನೇಜರ್ಸ್ ಆಗಲಿರುವ ಕಾಲೇಜು ವಿದ್ಯಾರ್ಥಿಗಳು, ಹಂಪಿಯಲ್ಲಿ ಪ್ರತಿದಿನ ನಡೆಯುವ ನಿರ್ವಹಣೆ ಕೆಲಸಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಅದರಲ್ಲಿ ವಿಶೇಷವಾಗಿ ಟಿಕೆಟ್ ಕೌಂಟರ್ ನಲ್ಲಿ ಇಲಾಖೆಯ ಸಿಬ್ಬಂದಿ ಜತೆಗೆ ಕುಳಿತು ಟಿಕೆಟ್ ವಿತರಣೆಗೆ ಸಹಾಯ, ಟಿಕೆಟ್ ಕೌಂಟರ್ ಬಳಿ ಟಿಕೆಟ್ ಪಡೆಯುವಂತೆ ಮತ್ತು ಆನ್‌ಲೈನ್ ಪೇಮೆಂಟ್‌ಗೆ ಕ್ಯೂಆರ್ ಕೋಡ್ ಇರುವ ಕುರಿತು ಟೂರಿಸ್ಟ್ಗಳಿಗೆ ಮಾಹಿತಿ ನೀಡುವುದು, ಭದ್ರತಾ ಸಿಬ್ಬಂದಿಗಳೊAದಿಗೆ ಇದ್ದು ಜನಸಂದಣಿ ನಿಯಂತ್ರಣ ಮಾಡುವುದು, ಒಬ್ಬೊಬ್ಬ ವಿದ್ಯಾರ್ಥಿಗಳಿಗೆ ಒಂದೊAದು ಸ್ಮಾರಕದ ಇತಿಹಾಸ ತಿಳಿಸಿ ಅಲ್ಲಿ ನಿಯೋಜಸಲಿದ್ದು, ಅವರು ಆ ಸ್ಮಾರಕದ ಐತಿಹಾಸಿಕ ವಿಶೇಷದತೆ ಮತ್ತು ಅದರ ಮಾಹಿತಿಯನ್ನು ಪ್ರವಾಸಿಗರಿಗೆ ತಿಳಿಸಬೇಕು. ಬ್ಯಾಟರಿ ಚಾಲಿತ ವಾಹನ ಚಾಲಕರ ಜತೆಗಿದ್ದು, ಅವರಿಗೆ ಸಹಾಯ ಮಾಡುವುದು, ಸ್ವಚ್ಛತೆ ಮಾಡುವವರ ಜತೆ, ಗೈಡಿಂಗ್ ಸೇರಿದಂತೆ ಹಂಪಿಯಲ್ಲಿ ನಡೆಯುವ ಎಲ್ಲ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಹಂಪಿಯ ಮಹತ್ವ, ಸಂರಕ್ಷಣೆ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಜವಾಬ್ದಾರಿಯ ಅರಿವು ಮೂಡಿಸ ಈ ಹೊಸ ಪ್ರಯೋಗ ಮಾಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳನ್ನು ಹಂಪಿ ಹೆರಿಟೇಜ್ ಮ್ಯಾನೇಜರ್ಸ್ ಆಗಿ ಮಾಡಿ ಅಲ್ಲಿ ನಡೆಯುವ ನಿರ್ವಹಣಾ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಂಡು ಮಾಹಿತಿ ನೀಡುವ ಉದ್ದೇಶದಿಂದ ಈ ಚಿಂತನೆ ನಡೆಸಿದ್ದು, ಕಾಲೇಜುಗಳೊಂದಿಗೆ ಮಾತುಕತೆ ನಡೆದಿದೆ. ನಿಹಿಲ್ ದಾಸ್, ಅಧೀಕ್ಷಕರು, ಭಾರತೀಯ ಪುರಾತತ್ವ ಇಲಾಖೆ, ಹಂಪಿ ವೃತ್ತ.