ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಜಿಲ್ಲೆಯ ಒಂದು ನಗರಸಭೆ, ಮೂರು ಪುರಸಭೆ, ನಾಲ್ಕು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿದ್ದು, ಅಧಿಕಾರ ಹಿಡಿಯಲು ತಂತ್ರಗಾರಿಕೆ ಶುರುವಾಗಿದೆ.
ನಗರಾಭಿವೃದ್ಧಿ ಇಲಾಖೆ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ಇಲ್ಲಿನ ನಗರಸಭೆ ಸೇರಿದಂತೆ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಒಟ್ಟು 8 ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟವಾಗಿದೆ. ಹಗರಿಬೊಮ್ಮನಹಳ್ಳಿ ಪುರಸಭೆ ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ಮೊದಲನೇ ಅವದಿಯ ಅಧಿಕಾರ ಮೀಸಲಾತಿ ಪ್ರಕಟವಾದರೆ, ಹೊಸಪೇಟೆ, ಕಮಲಾಪುರ, ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ, ಕೊಟ್ಟೂರು ಸ್ಥಳೀಯ ಆಡಳಿತಕ್ಕೆ ಎರಡನೇ ಅವದಿಯ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಪ್ರಕಟವಾಗಿದೆ. ಆದ್ದರಿಂದ ಸದಸ್ಯರನ್ನು ಸೆಳೆಯಲು ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇನ್ನೋಂದೆಡೆ ಶಾಸಕರ, ಸಚಿವರ ದುಂಬಾಲು ಬಿದ್ದಿದ್ದಾರೆ.
....ಬಾಕ್ಸ್....
ಆಡಳಿತದ ತವಕ:
ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಲ್ಲಿ ಹಗರಿಬೊಮ್ಮನಹಳ್ಳಿ ಪುರಸಭೆ ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಗೆ ಮೊದಲ ಅವದಿಯ ಮೀಸಲಾತಿ ಪ್ರಕಟವಾಗಿದೆ. ಇನ್ನೂ ಹೊಸಪೇಟೆ ನಗರಸಭೆ ಸೇರಿ ಉಳಿದ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಎರಡನೇ ಅವದಿಯ ಮೀಸಲು ಪ್ರಕಟವಾಗಿದೆ. ಇನ್ನೂ ಚುನಾವಣಾ ದಿನಾಂಕ ಪ್ರಕಟ ಬಾಕಿಯಿದ್ದು ಇನ್ನೆರಡು ಮೂರು ದಿನಗಳಲ್ಲಿ ಅಧಿಸೂಚನೆ ಬರಲಿದೆ ಎನ್ನಲಾಗುತ್ತಿದೆ. ಒಂದು ವೇಳೆ ದಿನಾಂಕ ಪ್ರಕಟ ಆಗುವ ಮುನ್ಮ ಮೀಸಲು ಪ್ರಶ್ನಿಸಿ ನ್ಯಾಯಲಯದ ಮೊರೆ ಹೋದರೆ, ಮತ್ತೆ ಮುಂದುಡುವ ಸಾಧ್ಯತೆಯಿದೆ.
ಅಧಿಕಾರ ಸಿಗಲೆಂದು ಪ್ರಾರ್ಥನೆ
ಕಳೆದ ಮೂರು ವರ್ಷದಿಂದ ಮೊದಲ ಅವದಿಯ ಅಧಿಕಾರ ಹಿಡಿಯದ ಹಗರಿಬೊಮ್ಮನಹಳ್ಳಿ ಹಾಗೂ ಮರಿಯಮ್ಮನಹಳ್ಳಿ ಸ್ಥಳೀಯ ಸಂಸ್ಥೆ ಸದಸ್ಯರು ಮತ್ತು ಒಂದು ವರ್ಷಕ್ಕೂ ಅಧಿಕ ಕಾಲದಿಂದ ಎರಡನೇ ಅವದಿ ಅಧಿಕಾರದ ಚುಕ್ಕಾಣಿ ನನೆಗುದಿಗೆ ಬಿದ್ದಿದ್ದ ಜಿಲ್ಲೆಯ 2 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ. ಇನ್ನೂ ಹೊಸಪೇಟೆ ನಗರಸಭೆಯ ಮೀಸಲಾತಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಕೊನೆಗೂ ಅಧ್ಯಕ್ಷ-ಉಪಾಧ್ಯಕ್ಷ ಭಾಗ್ಯ ದೊರೆಯಲಿದೆ. ಆದಷ್ಟು ಬೇಗ ದಿನಾಂಕ ನಿಗದಿಯಾಗಲಿ ಎಂದು ಆಕಾಂಕ್ಷಿಗಳ ಪ್ರಾರ್ಥನೆಯಾಗಿದೆ.
ವಿಜಯನಗರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಸೋಮವಾರ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ. ಚುನಾವಣೆ ದಿನಾಂಕ ಅಧಿಸೂಚನೆ ಬಂದ ಕೂಡಲೇ ಕ್ರಮಕೈಗೊಳ್ಳಲಾಗುತ್ತದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ
-ಉಪಾಧ್ಯಕ್ಷ ಸ್ಥಾನಗಳಿಗೆ ಈಗಾಗಲೇ ಮೀಸಲಾತಿ ಪ್ರಕಟವಾಗಿದೆ. ಚುನಾವಣೆ ದಿನಾಂಕವನ್ನು ಸರ್ಕಾರ ಆದೇಶದ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಯಾವಗ? ಎಲ್ಲಿ? ಚುನಾವಣೆ ನಡೆಯಬೇಕು ಎಂದು ಆದೇಶ ಬರಲಿದೆ. - ಮನೋಹರ್, ಜಿಲ್ಲಾ ನಗರ ಯೋಜನಾ ನಿರ್ದೇಶಕ, ವಿಜಯನಗರ