ನ್ಯೂಸ್

ನವಜಾತ ಶಿಶು ಮಾರಾಟ ಪ್ರಕರಣ ದಾಖಲು

ಹೊಸಪೇಟೆ: ಐದು ದಿನ ಹೆಣ್ಣು ಮಗುವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದ್ದು, ನಾಲ್ಕು ಜನರ ವಿರುದ್ಧ ಇಲ್ಲಿನ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪುರ ಎಚ್.ಪಿ.ಸಿಯ ಮಣಿಮಾಲ ಎಂಬುವರು 10 ಸಾವಿರ ರೂ.ಗೆ ಹಗರಿಬೊಮ್ಮನಹಳ್ಳಿ ಮೂಲದ ಕರಿಬಸಪ್ಪ ಎಂಬುವರಿಗೆ ಆ.31ರಂದು 5 ದಿನದ ಮಗುವನ್ನು ಮಾರಾಟ ಮಾಡಗಿದೆ ಎಂದು ಆರೋಪಿಸಿ ಮಕ್ಕಳ ಘಟಕದ ಚಿದಾನಂದ ದೂರು ನೀಡಿದ್ದಾರೆ.

ಆ.26ರಂದು ಮಣಿಮಾಲ ಹೆಣ್ಣು ಮಗುಗೆ ಜನ್ಮ‌ನೀಡಿದ್ದಾರೆ. ಆಸ್ಪತ್ರೆ ಬಳಿ ಮಾರಾಟ ಮಾಡಲಾಗಿದೆ ಎಂದು ಮಕ್ಕಳ ಸಹಾಯವಾಣಿಗೆ ಕರೆ ಬಂದ ಹಿನ್ನೆಲೆಯಲ್ಲಿ ಮಕ್ಕಳ ಘಟಕದ ಚಿದಾನಂದ ಎಂಬವರು ಕಮಲಾಪುರ‌ ಪೊಲೀಸರ ಸಹಾಯದಿಂದ ವಿಚಾರಣೆ ನಡೆಸಿದ ವೇಳೆ ಮಣಿಮಾಲ ಅವರು ತಪ್ಪೊಪ್ಪಿಕೊಂಡಿದ್ದಾರೆ. ಮಗು ಮಾರಾಟ ಮಾಡಿದ ಮಣಿಮಾಲ, ಸಹಾಯ ಮಾಡಿದ ಆಶಾ ಕಾರ್ಯಕರ್ತೆರಾದ ಹೊಸಪೇಟೆಯ ಕವಿತಾ, ನಾಗರತ್ನ ಸೇರಿಂದತೆ ಖರೀದಿಸಿದ್ದ ಕರಿಬಸಪ್ಪ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೆಣ್ಣು ಮಗುವನ್ನು ಮಕ್ಕಳ ದತ್ತು ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.