ಹೊಸಪೇಟೆ: 76 ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ದೇಶದ ಅತಿ ಎತ್ತರದ 405 ಅಡಿ ಧ್ವಜಸ್ತಂಭದಿಂದ ರಾಷ್ಟ್ರ ಧ್ವಜ ಹರಿದು ಬಿದ್ದ ಅವಘಡ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದೆ.
8.55ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಖಾನ್ 405ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ ಮಾಡಿದರು. ನಂತರ ವೇದಿಕೆ ಮುಂದೆ ಧ್ವಜರೋಹಣ ಮಾಡಿದರು. ನಾನಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸುವ ವೇಳೆ 405 ಅಡಿ ಎತ್ತರದ ಧ್ವಜಸ್ತಂಬದಲ್ಲಿ ಏರುತ್ತಿರುವಾಗಲೇ ರಾಷ್ಟ್ರಧ್ವಜ ಏಕಾಏಕಿ ಹಗ್ಗ ಹರಿದು ಜಾರಿ ಬಿದ್ದಿದೆ.