ನ್ಯೂಸ್

ಪ್ರಿಯಾಂಕ್ ಖರ್ಗೆ ಮತ್ತು ಅವರಪ್ಪಗೆ ಉಳಿಸಿದ್ದು ಆರ್‌ಎಸ್‌ಎಸ್

ಮಂಜುನಾಥ

ಹೊಸಪೇಟೆ: ಆರ್‌ಎಸ್‌ಎಸ್‌ಗೆ ದೇಶ ಭಕ್ತಿ ಇದೆ. ಹಾಗಾಗಿ ಭಾರತವು ಉಳಿದುಕೊಂಡಿದೆ ವಿಪಕ್ಷ ನಾಯಕ ಆರ್.ಆಶೋಕ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಎಸ್‌ಎಸ್ ಇರದಿದ್ದರೆ ದೇಶ ಇರುತ್ತಿರಲಿಲ್ಲ. ಮತ್ತೊಂದು ಪಾಕಿಸ್ತಾನ ಆಗುತ್ತಿತ್ತು. ಪ್ರಿಯಾಂಕ್ ಖರ್ಗೆ ಹಾಗೂ ಅವರಪ್ಪ ಮಲ್ಲಿಕಾರ್ಜುನ ಖರ್ಗೆ ಕೂಡ ಆರ್ ಎಸ್ಎಸ್ ನಿಂದ ಉಳಿದುಕೊಂಡಿದ್ದಾರೆ. ಇಲ್ಲವೆಂದರೆ ಪಾಕಿಸ್ಥಾನಕ್ಕೆ ಹೋಗುತ್ತಿದ್ದರು. ಕಾಂಗ್ರೆಸ್ ಈಗಾಗಲೇ ಭಾರತದಿಂದ ಎರಡು ಪಾಕಿಸ್ತಾನ ಮಾಡಿ ದೇಶ ವಿಭಜನೆ ಮಾಡಿದೆ. ಉಳಿದ ಭಾರತ ಆರ್ ಎಸ್ ಎಸ್ ನಿಂದ ಉಳಿದಿದೆ. ಅವರದ್ದೆ ಸರ್ಕಾರದ ಡಿ.ಕೆ.ಶಿವಕುಮಾರ್ ಅವರಿಗೆ ದೇಶ ಭಕ್ತಿ ಇದೆ. ಅವರು ಸಹ ಸದಾ ವಾತ್ಸಲೇ ಎಂದು ಹಾಡುತ್ತಾರೆ. ಅವರು ಪ್ರಯಾಗರಾಜ್‌ಗೂ ಕೂಡ ಹೋಗಿದ್ದರು ಎಂದರು.