ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರ ಮನೆಗೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರು ಭಾನುವಾರ ಸಂಜೆ ಭೇಟಿ ಗೌರವಿಸಿದರು.  
ನ್ಯೂಸ್

ಪದ್ಮಶ್ರೀ ಜೋಗತಿ ಮಂಜಮ್ಮ ಮನೆಗೆ ರಾಜ್ಯಪಾಲ ಭೇಟಿ

ಹೊಸಪೇಟೆ: ಜೋಗತಿ ನೃತ್ಯದ ಮೂಲಕ ಮನೆ ಮಾತಾಗಿರುವ ತಾಲೂಕಿನ ಮರಿಯಮ್ಮನಹಳ್ಳಿಯ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರ ಮನೆಗೆ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರು ಭಾನುವಾರ ಸಂಜೆ ಭೇಟಿ ನೀಡಿದರು.

ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರಿಗೆ ಮರಿಯಮ್ಮನಹಳ್ಳಿಯಲ್ಲಿ ಮಂಗಳ ಮುಖಿಯರು ಜೋಗತಿ ನೃತ್ಯದ ಮೂಲಕ ಸ್ವಾಗತಿಸಿದರು. ಬಳಿಕ ಮಂಜಮ್ಮ ಜೋಗತಿ ಅವರನ್ನು ಸನ್ಮಾನಿಸಿ, ಮೇಘಾಲಯ ರಾಜಭವನದ ಉಡುಗೊರೆ ನೀಡಿದರು. ಮಂಜಮ್ಮ ಜೋಗತಿಯವರು ರಂಗಭೂಮಿ ಕಲಾವಿದೆ. ಜಾನಪದ ಅಕಾಡೆಮಿ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು. ತೃತೀಯ ಲಿಂಗಿಯಾಗಿ ರಾಜ್ಯದ ಹಲವು ಕಡೆ ನಾಟಕಗಳ ಜತೆಗೆ ಬೀದಿ ನಾಟಕಗಳನ್ನ ಮಾಡಿದ್ದಾರೆ. 2021 ರಲ್ಲಿ ಇವರ ರಂಗಭೂಮಿಗೆ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ಜೋಗತಿ ನೃತ್ಯದ ಕಲೆಯ ವೈಶಿಷ್ಟತೆ ಹಾಗೂ ಅವರ ಹಿನ್ನೆಲೆ ಸಾಧನೆಗಳನ್ನು ತಿಳಿದುಕೊಂಡರು.

ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರಿಗೆ ಮರಿಯಮ್ಮನಹಳ್ಳಿಯಲ್ಲಿ ಮಂಗಳ ಮುಖಿಯರು ಸ್ವಾಗತಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ರೆಡ್ಡಿ, ಚಂದ್ರಶೇಖರ್ ಪಾಟೀಲ್, ಕೃಷ್ಣಾ ನಾಯ್ಕ್, ಬಲ್ಲಹುಣಿಸಿ ರಾಮಣ್ಣ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್ ಇತರರಿದ್ದರು.

ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅವರು ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸ್ಥಳಿಯ ಆಡಳಿತ ಸ್ವಚ್ಚತಾ ಕಾರ್ಯ ಮಾಡುವುದು ಭಾನುವಾರ ಕೂಡ ಕಂಡು ಬಂತು. ಪಟ್ಟಣದಲ್ಲಿ ಪೊಲೀಸರು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಸಿದ್ಧತೆ ಪರಿಶೀಲನೆ ಮಾಡಿದರು. ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಯಿತು.