ಹೊಸಪೇಟೆ: ಇನ್ಸೂರೆನ್ಸ್ ಆಸೆಗಾಗಿ ಸಿನಿ ರೀತಿಯಲ್ಲಿ ಅಮಾಯಕರ ಕೊಲೆ ಮಾಡಿರುವ ಘಟನೆ ನಗರದಲ್ಲಿ ಸೋಮವಾರ ನಡೆದಿದೆ ಎಂದು ಎಸ್ಪಿ ಎಸ್.ಜಾಹ್ನವಿ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಂಪ್ಲಿಯ ಜಿರಗನೂರು ನಿವಾಸಿಗಳ ಗಂಗಾಧರ (35) ಕೊಲೆಯಾದ ವ್ಯಕ್ತಿ. ಹಿಟ್ ಅಂಡ್ ರನ್ ಎಂದು ನಂಬಿಸಿ ಅಮಾಯಕನ ಕೊಲೆ ಮಾಡಲಾಗಿದೆ ಎಂದು ತಿಳಿಸಿದರು.
ನಗರದ ರವಿ, ಅಜಯ್, ರೀಯಾಜ್ ಕೊಲೆ ಆರೋಪಿಗಳು. ಆಕ್ಸಿಸ್ ಬ್ಯಾಂಕ್ ನೌಕರ ಯೋಗರಾಜ್ ಸಿಂಗ್ ಕೃತ್ತಕ್ಕೆ ಯೋಜನೆ ರೂಪಿಸಿದ್ದಾರೆ. ಕೊಪ್ಪಳ ಗಂಗಾವತಿ ಬಾಲಕೀಯರ ಪಿಯು ಕಾಲೇಜು ಉಪ ಪ್ರಾಂಶುಪಾಲರಾಗಿ ಕೃಷ್ಣಪ್ಪ ಈ ಕೃತ್ಯಕ್ಕೆ ಕಿಂಗ್ ಪಿನ್ ಆಗಿದ್ದಾರೆ. ನಗರದ ಹುಲಿಗೆಮ್ಮ ಜತೆ ನಕಲಿ ಮದುವೆ ಮಾಡಿದ್ದಾರೆ. ಆರು ಜನರನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.
ಕೊಲೆಯಾದ ಗಂಗಾಧರನಿಗೆ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಮಾಡಿ, ವಿವಿಧ ಇನ್ಸೂರೆನ್ಸ್ ಕಂಪನಿಗಳಲ್ಲಿ ಅಂದಾಜು 5.25 ಲಕ್ಷ ರೂ. ವಿಮೆ ಮಾಡಿಸಿದ್ದಾರೆ. 2024ರಲ್ಲಿ ಮದುವೆಯಾಗಿದೆ ಎಂದು ಮೂರು ತಿಂಗಳ ಹಿಂದೆ ಹುಲಿಗೆಮ್ಮ ಜತೆ ನಕಲಿ ಮದುವೆ ಮಾಡಿಸಿ, ನೊಂದಾಣಿ ಮಾಡಿಸಿದ್ದಾರೆ. ಈ ಭೂಪರು ಗಂಗಾಧರನಿಗೆ ಸೋಮವಾರ ಎಲ್ಲೋ ಕೊಲೆ ಮಾಡಿ, ನಗರ ಎಚ್.ಎಲ್.ಸಿ. ಕಾಲುವೆ ಬಳಿ ಹೆಣ ಬಿಸಾಕಿ ಹಿಟ್ ಅಂಡ್ ರನ್ ಆಗಿದೆ ಎಂದು ನಂಬಿಸಿದ್ದಾರೆ.
ಪ್ರಕರಣ ದಾಖಲಿಸಿದ ಪಟ್ಟಣ ಠಾಣೆ ಪೊಲೀಸರಿಗೆ ಅನುಮಾನವಾಗಿದೆ. ಮೃತನ ವಾರಸುದಾರನ ಪತ್ತೆ ಹಚ್ವಿ ತನಿಖೆ ಕೈಗೊಂಡಿದ್ದಾರೆ. ಮೃತನ ಪತ್ನಿ ಶಾರದಮ್ಮ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು 24 ಗಂಟೆಯಲ್ಲಿ 6 ಆರೋಪಿಗಳು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.