ಎಚ್.ಕೆ.ಪಾಟೀಲ್ 
ನ್ಯೂಸ್

ಹಣ ಇಲ್ಲದಾಗ ಹಿಡಿದು ಕೇಳಿದರೆ ಏನು ಪ್ರಯೋಜ?

ಮಂಜುನಾಥ

ಹೊಸಪೇಟೆ: ಕನ್ನಡ ವಿವಿಗೆ ಮಾತ್ರವಲ್ಲ ರಾಜ್ಯದ ಎಲ್ಲ ವಿವಿಗಳಿಗೆ ಅನುದಾನದ ಕೊರತೆ ಕಾಣುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ಕನ್ನಡ ವಿವಿಯ ಆವರಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ವಿವಿ ಕನ್ನಡ ಭಾಷೆ ಜತೆಗೆ ದೇಶದ ಇತಿಹಾಸವನ್ನು ಹೆಕ್ಕಿ ತೆಗೆಯುವ ಸಂಸ್ಥೆಯಾಗಿದೆ. ಇದರ ಮೇಲೆ ರಾಜ್ಯ ಮಾತ್ರವಲ್ಲ ಕೇಂದ್ರ ಸರ್ಕಾರದ ಜವಾಬ್ದಾರಿಯೂ ಇದೆ. ಈ ಭಾಗದ ಸಮಸ್ಯೆಯನ್ನು ಕೇಂದ್ರಕ್ಕೆ ಒತ್ತಾಯಿಸುವ ಪ್ರಯತ್ನ ಯಾರಾದರು ಮಾಡುತ್ತಿಲ್ಲ. ಇದಕ್ಕೆ ಮೂಲ ಕಾರಣರು ಯಾರು ಎಂಬುದು ಹುಡುಕದೆ ಹೋದರೆ ನಾನು ಜವಾಬ್ದಾರಿ ಮಂತ್ರಿಯಾಗಿ ಏನಂತ ಉತ್ತರ ನೀಡಲಿ? ನನ್ನ ಬಳಿ ಹಣ ಇಲ್ಲದೇ ಇದ್ದಾಗ ನನಗೆ ಹಿಡಿದು ಕೇಳಿದರೆ ಪ್ರಯೋಜನವಿಲ್ಲ. ಅದರ ಬದಲಿಗೆ ಕೇಂದ್ರ ಸರ್ಕಾರಕ್ಕೆ ಕೇಳಬೇಕಿದೆ. ವಿವಿಗಳಿಗೆ ಬರಿ ರಾಜ್ಯ ಸರ್ಕಾರ ಅನುದಾನ ಕೊಡಬೇಕ? ಉನ್ನತ ಶಿಕ್ಷಣ ಇಲಾಖೆ ಎನು ಮಾಡುತ್ತಿದೆ? ರಾಜ್ಯ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಕೊಡುಗೆಯಾದರೂ ಏನಿದೆ? ಎನ್‌ಇಪಿ ಯೋಜನೆ ತಂರುವ ಕೇಂದ್ರ ಸರ್ಕಾರ ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಬೇಕಿದೆ ಎಂದರು.

ಪ್ರವಾಸಿ ಮಾರ್ಗದರ್ಶಿಗಳಿಗೆ ತರಬೇತಿ ನೀಡಲು ಕನ್ನಡ ವಿವಿ ಹಾಗೂ ಗದಗಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿವಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಹೊಸದಾಗಿ ಪ್ರವಾಸೋದ್ಯಮ ನೀತಿಯನ್ನು ಮಾಡಿದ್ದೇವೆ. ಪ್ರವಾಸೋದ್ಯಮ ಜನ ಸಾಮಾನ್ಯರಿಗೆ ಮಜಾ ಮಸ್ತಿಗಳಿಗಾಗಿ ಅನುಕೂಲ ಮಾಡುವುವ ಉದೇಶವಲ್ಲ. ಶೈಕ್ಷಣಿಕ, ರೈತರ, ಶ್ರೀಸಾಮಾನ್ಯರ, ಬೇಸರ ಕಳೆಯುವ, ಆನಂದ ಪಡೆಯುವ, ಜಾಗೃತಿ ಪಡೆಯುವ ಪ್ರವಾಸಗಳಿಗೆ ಮಹತ್ವ ನೀಡಿ ಹೊಸ ನೀತಿ ಮಾಡಿದ್ದೇವೆ. ಇದರಿಂದ ಪ್ರವಾಸೋದ್ಯಮದಲ್ಲಿ ಬಹಳ ದೊಡ್ಡ ಬದಲಾವಣೆ ಕಾಣಲಿದೆ. ಯಲ್ಲಮನ ಗುಡ್ಡಕ್ಕೆ ನೀಡಿರುವ ಮೂಲಭೂತ ಸೌಕರ್ಯದಂತೆ ರಾಜ್ಯದ ಎಲ್ಲಾ ಪ್ರವಾಸಿ ತಾಣಗಳಿಗೆ ಬದಲಾವಣೆ ತರಲಿದ್ದೇವೆ. ಅದರಲ್ಲೂ ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಂಡ ಹಂಪಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ವರ್ಷದೊಳಗೆ ಇಲ್ಲಿನ ಸಮಸ್ಯೆ ಪಹರಿಸುತ್ತೇವೆ ಎಂದರು.