ನ್ಯೂಸ್

ಕನ್ನಡ ವಿವಿಗೆ ತಪ್ಪದ ಕಾಡು ಪ್ರಾಣಿಗಳ ಕಾಟ

ಮಂಜುನಾಥ

ಹೊಸಪೇಟೆ: ಕನ್ನಡ ಭಾಷೆ ಬೆಳವಣಿಗೆಗಾಗಿ ಜನ್ಮ ತಾಳಿದ ಕನ್ನಡ ವಿವಿಗೆ 30 ವರ್ಷ ಕಳೆಯಿತು. ಆದರೆ, ವಿವಿಗೆ ಆರ್ಥಿಕ ಸಂಕಷ್ಟದ ಜತೆಗೆ ಕಾಡು ಪ್ರಾಣಿಗಳಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಲ್ಲಿ ಪ್ರಾಣ ಭಯ ಹೆಚ್ಚಾಗಿದೆ.

ಕನ್ನಡ ವಿವಿಯೂ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಿಂದ ಕಮಲಾಪುರ ಮಾರ್ಗವಾಗಿ 15 ಕಿಮೀ ಹಾಗೂ ಪಿಕೆಹಳ್ಳಿ ಮಾರ್ಗವಾಗಿ 18 ಕಿಮೀ ಇದೆ. ವಿಶ್ವವಿಖ್ಯಾತ ಹಂಪಿಯಿAದ 8 ದೂರದಲ್ಲಿ ಆಗ್ನೇಯ ಭಾಗದಲ್ಲಿರುವ ವಿವಿಯೂ ದರೋಜಿ ಕರಡಿ ಧಾಮ ಅರಣ್ಯಕ್ಕೆ ಹೊಂದಿಕೊAಡಿದೆ. ವಿವಿಗೆ ಕಾಂಪೌAಡ್ ಇಲ್ಲದೇ ಕಾಡು ಪ್ರಾಣಿಗಳು ಮುಕ್ತವಾಗಿ ಒಡಾಡುತ್ತವೆ. ಅಂದಾಜು 700 ಎಕರೆ ವಿಶಾಲ ಹಸಿರು ಹೊದಿಕೆಯಿಂದ ಆವೃತವಾಗಿರುವ ಕನ್ನಡ ವಿವಿಯಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲದೇ ಭೋಧಕ ಹಾಗೂ ಭೋಧಕೇತರಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಕಾಡು ಪ್ರಾಣಿಗಳಿಂದ ಮಾತ್ರವಲ್ಲದೇ ಮರಗಳ್ಳರಿಂದ ಹಾಗೂ ಇತರೆ ಕಾರಣಗಳಿಂದ ವಿವಿಯನ್ನು ರಕ್ಷಣೆ ನೀಡಬೇಕಿದೆ ಎಂದು ವಿವಿಯ ಆರಂಭದಿAದ ಕಾಂಪೌAಡ್‌ಗಾಗಿ ಪ್ರಸ್ತಾವನೆ ಕಳಿಸಿದರು ಸರ್ಕಾರಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂಬುದು ವಿಪಾರ್ಯಸವೇ ಸರಿ.

ವಿವಿಯ ಪಕ್ಕದಲ್ಲೇ ದರೋಜಿ ಕರಡಿ ಧಾಮ ಇರುವುದರಿಂದ ಕಾಂಪೌAಡ್ ಇಲ್ಲದ ವಿವಿಯ ಆವರಣದಲ್ಲಿ ಕರಡಿ, ಚಿರತೆ ಮಾತ್ರವಲ್ಲ ಪ್ರಾಣ ಹಾನಿ ಮಾಡುವ ಕಾಡು ಪ್ರಾಣಿಗಳು ನಿರಂತರವಾಗಿ ಓಡಾಡುತ್ತವೆ. ಕಳೆದ ಒಂದು ವಾರದಿಂದ ಚಿರತೆಯಂತು ವಿವಿಯ ಆವರಣದಲ್ಲೆ ಪ್ರತಿದಿನ ಓಡಾಡುತ್ತಿದೆ. ವಿವಿಯಲ್ಲಿ ಮನುಷ್ಯರ ಮೇಲೆ ಸಧ್ಯದ ವರೆಗೆ ದಾಳಿಯಂತು ಆಗಿಲ್ಲ. ಆದರೆ, ನಾಯಿಗಳು ಕಾಣೆಯಾಗುವುದು ಇಲ್ಲಿ ಸಾಮಾನ್ಯವಾಗಿದೆ. ಆದ್ದರಿಂದ ಕಾಂಪೌAಡ್ ನಿರ್ಮಾಣ ಮಾಡಿ ವಿವಿಗೆ ರಕ್ಷಣೆ ನೀಡಬೇಕಿದೆ ಎಂಬುದು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿಗಳ ಅಳಲಾಗಿದೆ.

ಸರ್ಕಾರದ ಸ್ಪಂಧನೆ, ಉತ್ತರ ಇಲ್ಲ

ವಿವಿಯಲ್ಲಿ 270 ವಿದ್ಯಾರ್ಥಿಗಳು, 250 ಜನ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳಿದ್ದಾರೆ. ಆವರಣದ ಒಳಗಡೆ ಎಸ್ಸಿ-ಎಸ್ಟಿ ವಿದ್ಯಾರ್ಥಿನಿ ನಿಲಯ ಹಾಗೂ ಒಬಿಸಿ ವಿದ್ಯಾರ್ಥಿನಿಲಯ, ಆವರಣದ ಹೊರಗಡೆ ಎಸ್ಸಿ ಎಸ್ಟಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಲಯಗಳಿವೆ. ಅಧ್ಯಾಪಕರ ಹಾಗೂ ಸಿಬ್ಬಂದಿಗಳ ವಸತಿ ನಿಲಯಗಳಿವೆ. ಹಾಗೂ 32 ಕಟ್ಟಡಗಳಿವೆ. 30 ವರ್ಷದಲ್ಲಿ ದಟ್ಟವಾದ ಅರಣ್ಯ ಬೆಳೆದಿದೆ. ಶ್ರೀಗಂಧ, ಆಯುವೇಧ, ಅಪರೂಪದ ಹಾಗೂ ನೈಸರ್ಗಿಕ ಗಿಡ ಮರಗಳಿವೆ. ವಿವಿ ಅವರಣದಲ್ಲಿ ಅತ್ಯುತ್ತಮವಾದ ಜೀವ ವೈವಿದ್ಯಾಮಯವಿದೆ. ಇವುಗಳ ರಕ್ಷಣೆಗಾದರೂ ಕಾಂಪೌAಡ್ ನಿರ್ಮಾಣ ಅನಿವಾರ್ಯವಾಗಿದೆ. ವಿವಿಯ ಎಲ್ಲಾ ಕುಲಪತಿಗಳು ಸರ್ಕರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ, ಸ್ಪಂಧನೆಯೂ ಇಲ್ಲ ಉತ್ತರ ಕೂಡ ಇಲ್ಲ.

ಎರಡು ರೀತಿಯಲ್ಲಿ ಪ್ರಸ್ತಾವನೆ

ವಿವಿಯೂ ಅಂದಾಜು 700 ಎಕರೆ ಪ್ರದೇಶದಲ್ಲಿ ಸುತ್ತಲು ಅಂದಾಜು 16 ಕಿಮೀ ಕಾಂಪೌAಡ್ ನಿರ್ಮಾಣ ಆಗಬೇಕಿದೆ. ಈ ಹಿಂದಿನ ಕುಲಪತಿಗಳು ಕೂಡ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೂ ಸರ್ಕಾರ ಸ್ಪಂಧನೆ ನೀಡದಿದ್ದಾಗ ಜಿಂದಾಲ್‌ಗೆ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಆದರೆ, ಕೆಲ ಕಾರಣಂತರಗಳಿAದ ಅದು ಕೂಡ ವಿಫಲವಾಗಿದೆ. ಈಗಿನ ಕುಲಪತಿ ಡಾ.ಪರಮಶಿವಮೂರ್ತಿ ಅವರು ಕೆಕೆಆರ್‌ಡಿಬಿ, ಕೆಎಂಆರ್‌ಸಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಎರಡು ರೀತಿಯ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮೊದಲು 24 ಕೋಟಿ ರೂ. ವೆಚ್ಚದಲ್ಲಿ 8 ಅಡಿ ಎತ್ತರದ ಕಲ್ಲಿನ ಗೋಡೆ ಪ್ರಸ್ತಾವನೆ ನೀಡಿತು. ಆದರೆ, ವೆಚ್ಚ ಹೆಚ್ಚಾಯಿತು ಎಂದಾಗ 15 ಕೋಟಿ ರೂ. ವೆಚ್ಚದಲ್ಲಿ ಮೂರು ಅಡಿ ಎತ್ತರದ ಕಲ್ಲಿನ ಹಾಗೂ ಕಾಂಕ್ರೀಟ್ ಗೋಡೆಯ ಮೇಲೆ ಕಬ್ಬಿಣದ ಜಾಲರಿಯ ತಡೆ ಗೋಡೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಳೆದ 30 ವರ್ಷಗಳಿಂದ ವಿವಿಗೆ ಅವರಣದಲ್ಲಿ ಕಾಡು ಪ್ರಾಣಿಗಳ ಒಡಾಟ ಸಾಮಾನ್ಯವಾಗಿದೆ. ವಿವಿ ರಕ್ಷಣೆಗೆ ಕಾಂಪೌAಡ್ ನಿರ್ಮಾಣದ ಪ್ರಸ್ತಾವನೆ ಹಿಂದಿನ ಕುಲಪತಿಗಳು ಕೂಡ ಸಲ್ಲಿಸಿದ್ದಾರೆ. ಸಧ್ಯ ನಾವು ಕೂಡ ಎರಡು ರೀತಿಯ ಪ್ರಸ್ತಾವನೆ ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರ ಅನುದಾನ ನೀಡಿದರೆ ಕಾಂಪೌAಡ್ ನಿರ್ಮಾಣ ಆಗಲಿದೆ. - ಡಾ.ಪರಮಶಿವಮೂರ್ತಿ, ಕನ್ನಡ ವಿವಿ ಕುಲಪತಿ