ನ್ಯೂಸ್

ಸಿಎಂಗೆ ಟಿಪ್ಪು ಮನಸ್ಥತಿ

ಮಂಜುನಾಥ

ಹೊಸಪೇಟೆ: ದಸರಾ ಹಬ್ಬಕ್ಕೆ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಷ್ತಾಕ್ ಚಾಲನೆ ಹಿನ್ನೆಲೆ ರಾಜ್ಯ ರ‍್ಕಾರದಿಂದ ಹಿಂದುಗಳಿಗೆ ಅವಮಾನ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಸರಾ ಹಬ್ಬ ಹಿಂದೂಗಳ ಹಬ್ಬ. ಮುಸ್ಲಿಂರ ರ‍್ಮದಲ್ಲಿ ಮರ‍್ತಿ ಪೂಜೆ ನಿಷೇಧ ಇದೆ. ಆದರೆ, ಭಾನು ಮುಷ್ತಾಕ್ ಪೂಜೆ ಮಾಡಿದರೆ ಅವರ ರ‍್ಮ ವಿರೋಧಿಸುತ್ತೆ. ಅವರನ್ನು ರ‍್ಮದಿಂದ ಹೊರ ಹಾಕಿದರೆ ಏನ್ ಮಾಡುತ್ತಿರಾ? ಚಾಮುಂಡೇಶ್ವರಿ ದೇವಿಗೆ ಅವರಿಂದ ಯಾಕೆ ಪೂಜೆ ಮಾಡಿಸಬೇಕು. ಹಿಂದುಗಳನ್ನು ವಿರೋಧ ಮಾಡೋರುಚಾಮುಂಡೇಶ್ವರಿ ಪೂಜೆ ಯಾಕೆ ಮಾಡಬೇಕು ಎಂದು ಪ್ರಶ್ನೆ ಮಾಡಿದರು.

ದೇವಿಯ ಪೂಜೆ ಮಾಡೊಕೆ ಹಿಂದು ರ‍್ಮದಲ್ಲಿ ಯಾರು ಇಲ್ವಾ? ಸಿದ್ದರಾಮಯ್ಯ ರ‍್ಕಾರ ನಮ್ಮ ರ‍್ಮಕ್ಕೆ ಕಳಂಕ ತರುತ್ತಿದ್ದಾರೆ. ಅವರಿಗೆ ಟಿಪ್ಪು ಮನಸ್ಥತಿ ಇದೆ. ಹಾಗಾಗಿ ಮುಸ್ಲಿಂರನ್ನು ಆಯ್ಕೆ ಮಾಡಿದ್ದಾರೆ ಎಂದು ಟೀಕಿಸಿದರು.