ನ್ಯೂಸ್

ಮುಖ್ಯಮಂತ್ರಿ ಸ್ಥಾನಕ್ಕೆ ಪೈಟು, ಸಿಎಂ ಹೆಂಡತಿಗೆ ಸೈಟು

ಹೊಸಪೇಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಹಗರಣ ಹೊತ್ತು ನ್ಯಾಯಾಲಯಕ್ಕೆ ಅಲೆಯುತ್ರಿದ್ದಾರೆ. ಇದರಿಂದ ರಾಜ್ಯವೇ ತಲೆತಗಿಸುವಂತಾಗಿದೆವೆAದು ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಗರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸನ್ಮಾನ ಸಮಾರಂಭ ಹಾಗೂ ಬೂತ್ ಮಟ್ಟದ ಸದಸತ್ವ ಮಹಾ ಅಭಿಯಾನ ಸಭೆಯಲ್ಲಿ ಮಾತನಾಡಿದರು.

ಚೀನದಲ್ಲಿ ಕಮ್ಯುನಿಸ್ಟ್ ಪಕ್ಷ ಬಿಟ್ಟರೆ, ಬಿಜೆಪಿ ಜನಗತ್ತಿನಲ್ಲಿ ದೊಡ್ಡ ಪಕ್ಷವಾಗಿದೆ. ಜನಗತ್ತಿನಲ್ಲಿ 18 ಕೋಟಿ ಸದಸತ್ವ ಪಡೆದ ಪಾರ್ಟಿ ಇದಾಗಿದೆ. ರಾಜ್ಯದಲ್ಲಿ ಶಾಸಕರ, ಮಂತ್ರಿಗಳ ಸಹಕಾರ ಸಿಗುತ್ತಿಲ್ಲ ಎಂದು ಸಿಎಂಗೆ ಅವರ ಆರ್ಥಿಕ ಸಲಹೆಗಾರ ಪತ್ರ ಬರೆಯುತ್ತಾರೆ. ಆದರೆ, ಬಾಯಿ ಮುಚ್ಚಲು ಸಿಎಂ ಬಿಸ್ಕತ್ತು ಹಾಕಿ ಹೀಗೆ ಮಾತನಾಡಬಾರದು ಎಂದು ಸಲಗೆಗಾರರ ಬಾಯಿ ಬಂದ್ ಮಾಡಿದ್ದಾರೆ. ಇನ್ನೂ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಟು, ಸಿಎಂ ಹೆಂಡತಿಗೆ ಸೈಟು ಎಂಬ ಸುದ್ದಿ ಕೂಡ ಜೋರಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಖರ್ಗೆಗೆ ಇಲ್ಲಿ ಸಿಎಂ ಮಾಡಿ, ಅಲ್ಲಿ ರಾಷ್ಟ್ರೀಯ ಅಧ್ಯಕ್ಷ ಕನಸು ಕಾಣುತ್ತಿದ್ದರೆ. ಇತ್ತ ಸಿಎಂ ಸಿದ್ದರಾಮಯ್ಯ ಖರ್ಗೆಗೆ ಸಿಎಂ ಆಗಬಾರದು ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ರಾಜ್ಯದ ಸರ್ಕಾರದ ಆಡಳಿತ ವೈಫಲ್ಯಕ್ಕೆ ಜನ ಸಾಮಾನ್ಯರು ಬೇಸತ್ತಿದ್ದಾರೆ. ಆದ್ದರಿಂದ ಈ ಸದಸತ್ವ ರಾಜ್ಯ ಸರ್ಕಾರದ ವೈಫಲ್ಯ, ಕೇಂದ್ರ ಸರ್ಕಾರದ ಸಾಧನೆ ಜನ ಸಾಮಾನ್ಯರಿಗೆ ತಿಳಿಪಡಿಸಬೇಕಿದೆ ಎಂದರು.