Yellowstone: ಪಿಕಪ್ ಮತ್ತು ಟೂರ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ ಘಟನೆ ಅಮೆರಿಕದ ವ್ಯೋಮಿಂಗ್‌ನ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ಬಳಿ ಗುರುವಾರ (ಮೇ.1) ಸಂಜೆ ನಡೆದಿದೆ.
ಇದನ್ನೂ ಓದಿ: ಯಾವ ಒಣ ಹಣ್ಣುಗಳನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ತಿನ್ನಬೇಕು ಎಂದು ನಿಮಗೆ ತಿಳಿದಿದೆಯೇ? dry fruits
ಪೂರ್ವ ಇಡಾಹೊದ ಹೆನ್ರಿಯ ಲೇಕ್ ಸ್ಟೇಟ್ ಪಾರ್ಕ್ ಬಳಿಯ ಹೆದ್ದಾರಿಯಲ್ಲಿ ಪಿಕಪ್ ಟ್ರಕ್ ಮತ್ತು ಟೂರ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಇಡಾಹೊ ರಾಜ್ಯ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ನಂತರ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಡಾಡ್ಜ್ ರಾಮ್ ಪಿಕಪ್ ಟ್ರಕ್‌ನ ಚಾಲಕ ಮತ್ತು ಮರ್ಸಿಡಿಸ್ ಪ್ಯಾಸೆಂಜರ್ ವ್ಯಾನ್‌ನಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ರಾಜಕೀಯ ಅಖಾಡಕ್ಕೆ ಅಜಿತ್ ಎಂಟ್ರಿ? ಶಾಕಿಂಗ್ ಉತ್ತರ ಕೊಟ್ಟ ತಮಿಳು ಅಭಿಮಾನಿಗಳ ‘ತಲಾ’ | Actor Ajith
ಪ್ಯಾಸೆಂಜರ್ ವ್ಯಾನ್ 14 ಜನರ ಪ್ರವಾಸಿ ಗುಂಪನ್ನು ಹೊತ್ತೊಯ್ಯುತ್ತಿತ್ತು, ಅಪಘಾತಕ್ಕೆ ಕಾರಣವೇನು ಎನ್ನುವುದಕ್ಕೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಬೆಳಿಗ್ಗೆಯವರೆಗೆ ಫ್ರೀಮಾಂಟ್ ಕೌಂಟಿ ಕರೋನರ್ ಕಚೇರಿಯು ಸಾವನ್ನಪ್ಪಿದವರ ಹೆಸರನ್ನು ಬಿಡುಗಡೆ ಮಾಡಿಲ್ಲ. ಜೊತೆಗೆ ಈ ಅಪಘಾತದಲ್ಲಿ ಇಡಾಹೊ ರಾಜ್ಯ ಪೊಲೀಸರು ಎಷ್ಟು ಜನರು ಗಾಯಗೊಂಡಿದ್ದಾರೆಂದು ಹೇಳಿಲ್ಲ. (ಏಜೆನ್ಸೀಸ್)