ಮೇಷ: ಕೆಲವು ಕಾಲದಿಂದ ಸ್ಥಗಿತಗೊಂಡಿದ್ದಂತಹ ವ್ಯಾಪಾರ, ಉದ್ಯೋಗ ಯೋಜನೆಗಳಿಗೆ ಮತ್ತೆ ಚಾಲನೆ ಒದಗಿಬರಲಿದೆ. ಶುಭಸಂಖ್ಯೆ: 5
ವೃಷಭ: ಮರಮಟ್ಟು, ಲೋಹ, ಪೀಠೋಪಕರಣಗಳ ವ್ಯಾಪಾರಕ್ಕೆ ಹಿನ್ನಡೆ ಇದೆ. ಅಂಬಿಕಾದೇವಿಯನ್ನು ಭಕ್ತಿಯಿಂದ ಸ್ತುತಿಸಿ. ಕ್ಷೇಮ. ಶುಭಸಂಖ್ಯೆ: 4
ಮಿಥುನ: ಮನುಷ್ಯರ ನಡುವಿನ ಸಂಬಂಧಗಳ ನೆಲೆಯನ್ನು ನೀವು ತಿಳಿದವರೇ ಆಗಿದ್ದೀರಿ. ಆದರೆ ಎಲ್ಲದಕ್ಕೂ ಒಂದು ಮಿತಿ ಇದ್ದೇ ಇರಲಿ. ಶುಭಸಂಖ್ಯೆ: 6 ಕಟಕ: ಮಕ್ಕಳು ನಿಮ್ಮ ಪ್ರಮುಖ ಆಸ್ತಿ ಎಂಬುದನ್ನು ಪರಿಗಣಿಸಿ. ಅವರಿಂದ ನಿಮ್ಮ ಪಾಲಿಗೆ ಕ್ಷೇಮ ಸಮಾಚಾರ ಒದಗಿಬರಲಿದೆ. ಶುಭಸಂಖ್ಯೆ: 3 ಸಿಂಹ: ಹೂಂಕರಿಸುವ ಅಹಂಕಾರದ ನಡೆ ಬೇಡ. ವಿನಾಕಾರಣ ಜಗಳವೇ ನಡೆದುಬಿಟ್ಟೀತು. ಹೆಚ್ಚಿನ ಎಚ್ಚರ ಇದ್ದಿರಲಿ. ಶುಭಸಂಖ್ಯೆ: 1 ಕನ್ಯಾ: ನ್ಯಾಯಾಲಯದಲ್ಲಿರುವ ಪ್ರಕರಣದ ವಿವರಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ನಿಮ್ಮ ದಾರಿ ತಪ್ಪಾಗದಿರಲಿ. ಶುಭಸಂಖ್ಯೆ: 2 ತುಲಾ: ಹೊಸ ಉದ್ಯೋಗ ಮೇಲ್ನೋಟಕ್ಕೆ ಸುಲಭ ಎಂದೇ ಅನಿಸಬಹುದು. ಬಾಳಸಂಗಾತಿಯ ಸಲಹೆಗಳನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 8 ವೃಶ್ಚಿಕ: ದುಷ್ಟ ಜನಗಳೇ ನಿಮ್ಮ ಮುಂದೆ ಧಾವಿಸಿ ಬರಬಹುದು. ಮೈಮರೆಯದೆ ಅಂಥವರನ್ನು ದೂರವಿಡಿ. ಜಾಗ್ರತೆಯಿಂದಿರಿ. ಶುಭಸಂಖ್ಯೆ: 7 ಧನಸ್ಸು: ಕೆಟ್ಟ ಕನಸುಗಳು ನಿಮ್ಮನ್ನು ಕಾಡಬಹುದು. ಮಲಗುವ ಮುನ್ನ ಶ್ರದ್ಧೆಯಿಂದ ಆಂಜನೇಯನ ಸ್ಮರಣೆ ಮಾಡಿಯೇ ನಿದ್ರಿಸಿ. ಶುಭಸಂಖ್ಯೆ: 9 ಮಕರ: ವಿವಾದಗಳೆಲ್ಲ ಮುಗಿದು ಕ್ರಿಯಾಶೀಲತೆಯ ದಾರಿ ಹಿಡಿದಿದ್ದೀರಿ. ಭಕ್ತಿಯಿಂದ ಪರಮೇಶ್ವರನ ಆರಾಧನೆ ಮಾಡಿದರೆ ಉತ್ತಮ. ಶುಭಸಂಖ್ಯೆ: 5 ಕುಂಭ: ಶ್ರಮಪಡುತ್ತಿದ್ದರೂ ಯಶಸ್ಸು ಕನಸೇ ಆಗಿದೆ. ಶ್ರೀ ಲಲಿತಾ ಸಹಸ್ರ ನಾಮಾವಳಿಯನ್ನು ಪಠಿಸಿ. ಕಷ್ಟಗಳು ನೀಗಲಿವೆ. ಶುಭಸಂಖ್ಯೆ: 4
ಮೀನ: ಸ್ನೇಹಿತರೊಂದಿಗಿನ ಮಾತುಕತೆಗಳು ಹೊಸ ಸಾಹಸದತ್ತ ದಾರಿ ತೆರೆಯಲಿವೆ. ಚಾತುರ್ಯದ ಮಾತುಗಳೂ ಮುಖ್ಯವಾಗಲಿವೆ. ಶುಭಸಂಖ್ಯೆ: 6