ಕುಮಟಾ: ಪಟ್ಟಣದ ಮಣಕಿ ಮೈದಾನದ ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಏಕಾಏಕಿ ಜೇನು ಹುಳುಗಳು ದಾಳಿ ಮಾಡಿದ್ದು, (Honeybee attack) ಗಾಯಗೊಂಡವರಿಗೆ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಣಕಿ ಮೈದಾನ ಪಕ್ಕದ ಮರವೊಂದಕ್ಕೆ ಕಟ್ಟಿದ್ದ ಗೂಡಿನಿಂದ ಜೇನು ಹುಳುಗಳು ಬಂದು ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನರ ಮೇಲೆ ದಾಳಿ ಮಾಡಿದೆ. ಈ ವೇಳೆ ಜೇನು ಕಚ್ಚಿಸಿಕೊಂಡು ಅಸ್ವಸ್ಥರಾದ ಅಳ್ವೇಕೋಡಿಯ ಭಾಸ್ಕರ ನಾಯ್ಕ, ರಾಘವೇಂದ್ರ ಸಾಲ್ಕೋಡ, ಶ್ವೇತಾ ನಾಯ್ಕ, ಪಾಂಡುರಂಗ ನಾಯ್ಕ ಇನ್ನಿತರರು ತಾಲೂಕಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಜೇನು ಹುಳುಗಳಿಂದ ಬಾಲಕಿಯೋರ್ವಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವರು ಜೇನು ಕಡಿತಕ್ಕೊಳಗಾಗಿದ್ದಾರೆ ಎಂದು ತಿಳಿದಬಂದಿದೆ.