Honey Trapped | ಪ್ರಭಾವಿ ಸಚಿವರನ್ನ ಹನಿಟ್ರ್ಯಾಪ್ ಮಾಡೋ ತಂತ್ರ ನಡೆಯುತ್ತಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕರನ್ನ ಹನಿಟ್ರ್ಯಾಪ್ ಮಾಡಲಾಗ್ತಾ ಇದೆ ಎಂದಿದ್ದಾರೆ.
ನಿರಂತರವಾಗಿ ಹನಿಟ್ರ್ಯಾಪ್ ಜಾಲ ನಡೆಯುತ್ತಾ ಇದೆ. ನಮ್ಮ ಸರ್ಕಾರದಲ್ಲೇ ಒಂದು ವಿಕೇಟ್ ಬಿಳಿಸೋ ತಂತ್ರ ನಡೆದಿದೆ. ಇದು ಒಳ್ಳೆಯದಲ್ಲ, ಕರ್ನಾಟಕದಲ್ಲಿ ಈ ರೀತಿಯ ಹನಿಟ್ರ್ಯಾಪ್ ಪ್ರಕರಣಗಳು ಮೊದಲೇನಲ್ಲ. ಇದಕ್ಕೂ ಮೊದಲು ಎರಡು ಬಾರಿ ಹನಿಟ್ರ್ಯಾಪ್ ಮಾಡುವ ಪ್ರಯತ್ನಗಳು ನಡೆದಿವೆ, ಆದ್ರೆ ಅಷ್ಟು ಸುಲಭವಾಗಿ ವಿಕೆಟ್ ಬಿದ್ದಿಲ್ಲ ಎಂದು ಜಾರಕಿಹೊಳಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಎಲ್ಲಾ ಪಕ್ಷದವರೂ ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ. ಹಿಂದಿನ ಸರ್ಕಾರದಲ್ಲೂ ಇದೇ ಹನಿಟ್ರ್ಯಾಪ್ ನಡೆದಿತ್ತು. ಮುಂದಿನ ಸರ್ಕಾರದಲ್ಲೂ ಇದು ನಡೆದರೆ ಅಚ್ಚರಿಯಿಲ್ಲ. ಇದಕ್ಕೆ ಸೂಕ್ತ ಬ್ರೇಕ್ ಹಾಕಬೇಕಿದೆ ಎಂದಿದ್ದಾರೆ.
ಮೊದಲು ನಡೆದ ಯತ್ನಗಳು ವಿಫಲವಾದ ಕಾರಣ ಮೂರನೇ ಬಾರಿ ಪ್ರಯತ್ನಿಸಲಾಗಿದೆ, ಟಾರ್ಗೆಟ್ ಆಗಿರುವ ಸಚಿವರು ದೂರು ಕೊಟ್ಟರೆ ಒಳ್ಳೇದು. ಆದ್ದರಿಂದ ಪೊಲೀಸ್ ತನಿಖೆಗೆ ಅನುಕೂಲವಾಗುತ್ತದೆ. ಹೀಗೆ ಮಾಡೋದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ, ಈ ಬಗ್ಗೆ ಸಿಎಂ ಜೊತೆ ಮಹತ್ವದ ಚರ್ಚೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.