ಬೈಲಹೊಂಗಲ: ನಗರದ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ವರ್ತಿ ಸಿದ್ಧಬಸವೇಶ್ವರ ಅರ್ಬನ್ ಕ್ರೆಡಿಟ್ ಕೋ&ಆಪ್ ಸೊಸೈಟಿ ಆಶ್ರಯದಲ್ಲಿ ನ.13 ರಂದು ಸಂಜೆ 4ಕ್ಕೆ ರಾಷ್ಟ್ರಮಟ್ಟದ ಬಯಲು ಕಣದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮಾಜಿ ಅಧ್ಯ ಬಾಬು ಬಸಪ್ಪ ಕುಡಸೋಮಣ್ಣವರ ಹೇಳಿದರು. ನಗರದ ಶ್ರೀ ವರ್ತಿ ಸಿದ್ಧಬಸವೇಶ್ವರ ಸೊಸೈಟಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಷ್ಟ್ರಮಟ್ಟದ ಪೈಲ್ವಾನರು ಭಾಗವಹಿಸಲಿದ್ದಾರೆ. ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಉದ್ಘಾಟಿಸುವರು ಎಂದು ತಿಳಿಸಿದರು. ಸೊಸೈಟಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳನ್ನವರ, ಅಬ್ದುಲ್ರೆಹಮಾನ್ ನಂದಗಡ, ರಾಮು ಕುಡಸೋಮಣ್ಣವರ, ಮಲ್ಲಿಕಾರ್ಜುನ ಗೌರಿ ಇತರರಿದ್ದರು.