ನ್ಯೂಸ್

ಹೆಚ್ಚು ಶ್ರಮವಿಲ್ಲದೆ ದೇಹ ಫಿಟ್​ ಇರಲು ಈ ಪಾನೀಯಗಳು ಬಳಸಿ.. | Homemade Drinks

Homemade drinks: ಹವಮಾನ ಬದಲಾಗುತ್ತಿದ್ದಂತೆ ಜನರು ಶೀತ, ಕೆಮ್ಮು ಇನ್ನಿತರ ಕಾಯಿಲೆಗಳಿಗೆ ಒಳಗಾಗುತ್ತಾರೆ. ಹಾಗಾಗಿ ನಮ್ಮ ದೇಹವು ಫಿಟ್​ ಆಗಿ ಮತ್ತು ಆರೋಗ್ಯವಾಗಿರಲು ಸಾಕಷ್ಟು ಪೌಷ್ಟಿಕಾಂಶದ ಅಗತ್ಯವಿದೆ. ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹವರು ಈ ರೀತಿಯ ಪಾನಿಯಗಳನ್ನು ಕುಡಿದರೆ ದೇಹವನ್ನು ಸಧೃಡವಾಗಿ ಇಟ್ಟುಕೊಳ್ಳಲು ಸಹಾಯವಾಗುತ್ತದೆ.

ಏನೆಲ್ಲಾ ಪಾನಿಯಗಳು ಗೊತ್ತಾ..

1.ಜೇನುತುಪ್ಪ ಮತ್ತು ದಾಲ್ಚಿನ್ನಿ ಚಹಾ

ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ನೀರನ್ನು ಬಿಸಿ ಮಾಡಿ, ಅದಕ್ಕೆ ದಾಲ್ಚಿನ್ನಿ ತುಂಡುಗಳನ್ನು ಸೇರಿಸಿ, ಹಸಿರು ಅಥವಾ ಕಪ್ಪು ಚಹಾ ಎಲೆಗಳನ್ನು ಹಾಕಿ ಕುದಿಸಿ, ಜೇನುತುಪ್ಪದೊಂದಿಗೆ ಬೆರಸಿ ಸೇವಿಸಬೇಕು. ಈ ಚಹವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಹಾಗೂ ಕೊಲೆಸ್ಟ್ರಾಲ್​ ಮಟ್ಟವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

2.ಜಪಾನ್​ ಮಚಾ ಟೀ(ಗ್ರೀನ್​)

ಹಾಲು ಅಥವಾ ನೀರನ್ನು ಬಿಸಿ ಮಾಡಿ, ಅದಕ್ಕೆ ಹಸಿರು ಜಪಾನಿಸ್​ ಮಚಾ ಚಹ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.

3. ಗ್ರೀನ್​ ಟೀ

ಗ್ರೀನ್​ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಗ್ರೀನ್​ ಟೀ ತಯಾರಿಸಿ, ಸ್ವಲ್ಪ ಜೇನುತುಪ್ಪ ಹಾಗೂ ಶುಂಠಿ ರಸವನ್ನು ಸೇರಿಸಿ ಬೆರಸಿ ಕುಡಿಯಬೇಕು.

4. ಕ್ಯಾಮೊಮೈಲ್ ಚಹಾ

ಕ್ಯಾಮೊಮೈಲ್​ ಚಹಾ ಕುಡಿಯುವುದರಿಂದ ವಿಶ್ರಾಂತಿ ಪಡೆಯಲು ಹಾಗು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೇ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. (ಏಜೆನ್ಸೀಸ್​)